ಹೊನ್ನಾಳಿ : ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಬರ ಬೇಕೆಂಬುದು ನನ್ನ ಕನಸಾಗಿದ್ದು, ಅದು ಇದೀಗ ನನಸಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿರುವ ಹಳೇ ಕಚೇರಿ ಜಾಗಕ್ಕೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹೊನ್ನಾಳಿ ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ನಿರ್ಮಾಣಕ್ಕೆ ಹತ್ತು ಕೋಟಿ ಬಿಡುಗಡೆಯಾಗಿದ್ದು ಆದಷ್ಡು ಬೇಗ ಅಧಿಕಾರಿಗಳು ನೂತನ ಕಟ್ಟಡದ ನೀಲಿನಕ್ಷೆ ಸಿದ್ದ ಪಡಿಸಿ, ಆದಷ್ಟು ಬೇಗ ಕಟ್ಟೆಡ ಕಾಮಗಾರಿಗೆ ಟೆಂಡರ್ ಕರೆಯುವಂತೆ ಸೂಚನೆ ನೀಡಿದ್ದೇನೆ ಎಂದರು..
ಸರ್ಕಾರಿ ಕಚೇರಿಗಳು ಒಂದೇ ಕಡೆ ಇರಬೇಕೆನ್ನುವ ಉದ್ದೇಶದಿಂದ ನೂತನ ತಾಲೂಕು ಆಡಳಿತ ಸೌಧದ ಸಂಕೀರ್ಣ ನಿರ್ಮಾಣ ಮಾಡಲು 20 ಕೊಟಿ ಹಣ ಬಿಡುಗಡೆ ಮಾಡುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿದ್ದೇ ಎಂದ ಶಾಸಕರು, ಇದೀಗ 10 ಕೋಟಿ ಹಣ ಬಿಡುಗಡೆ ಮಾಡಿದ್ದು, ಮುಂದಿನ ಹಂತದಲ್ಲಿ ಮತ್ತೆ 10 ಕೋಟಿ ಹಣ ಬಿಡುಗಡೆ ಯಾಗಲಿದೆ ಎಂದರು.
ಕೆಲ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಲ್ಲಿದ್ದರೆ, ಇನ್ನು ಕೆಲ ಕಚೇರಿಗಳು ಶಿಥಿಲಗೊಂಡಿದ್ದು, ಹಳ್ಳಿಗಳಿಂದ ಬರುವ ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳಿಗೆ ಅಲೆದಾಡುವ ಬದಲು ಒಂದೇ ಸೂರಿನಡಿ ಅವರ ಕೆಲಸಗಳು ಆಗಬೇಕೆಂಬುದೇ ನಮ್ಮ ಉದ್ದೇಶವಾಗಿದೆ ಎಂದರು.
ವಿನೂತನ ಮಾದರಿಯಲ್ಲಿ ತಾಲೂಕು ಆಡಳಿತ ಸೌಧದ ಸಂಕೀರ್ಣ ನಿರ್ಮಾಣವಾಗಲಿದೆ ಎಂದ ಶಾಸಕರು, ಈಗಾಗಲೇ ಅಧಿಕಾರಿಗಳು ಕಟ್ಟಡ ನಿರ್ಮಾಣದ ಜಾಗದ ಅಳತೆ ಮಾಡಿದ್ದು, ಆದಷ್ಟು ಬೇಗ ಕಟ್ಟಡದ ನೀಲಿನಕ್ಷೆ ಸಿದ್ದವಾಗಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು..
ನ್ಯಾಮತಿ ತಾಲೂಕಿಗೂ ತಾಲೂಕು ಆಡಳಿತ ಸೌಧದ ಸಂಕೀರ್ಣವನ್ನು ಕಂದಾಯ ಸಚಿವರ ಬಳಿ ಕೇಳಿದ್ದು, ಅದಕ್ಕೂ ಈ ವಾರದಲ್ಲಿ ಅನುದಾನ ಬಿಡುಗಡೆ ಆಗಲಿದೆ ಎಂದ ಅವರು, ನ್ಯಾಮತಿ ಪಟ್ಟಣದಲ್ಲೂ ಈಗಾಗಲೆ ಸ್ಥಳ ಗುರುತಿಸಲಾಗಿದ್ದು, ಅನುದಾನ ಬಿಡುಗಡೆಯಾಗುತ್ತಿದ್ದಂತೆ ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಬಿಸಲಾಗುವುದು ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಎಂಬುದು ಎಂದೂ ಮರೀಚಿಕೆಯಲ್ಲಾ, ಇಲ್ಲಿ ಅಭಿವೃದ್ದಿ ಕೆಲಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂದರು.
ಈ ಸಂದರ್ಭ ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ, ತಹಶೀಲ್ದಾರ್ ರಶ್ಮಿ, ಲೋಕೋಪಯೋಗಿ ಇಲಾಖೆ ಎಇಇ ಗಂಗಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.