ದಾವಣಗೆರೆ ಜು.26
ಪತ್ರಿಕೆ ಹಾಳೆಯ ಗುಣಮಟ್ಟಕ್ಕಿಂತ ಪತ್ರಿಕೆಯ ಒಳಗಿರುವ ಸುದ್ದಿ ಹೆಚ್ಚು ಮಹತ್ವವನ್ನು ಪಡೆದುಕೊಳ್ಳಲಿದೆ, ಆದ್ದರಿಂದ ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚು ನಿಭಾಯಿಸಬೇಕಿದೆ ಎಂದು ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಮತ್ತು ಆಂತರಿಕ ಗುಣಮಟ್ಟ ಕೋಶದಿಂದ ಆಯೋಜಿಸಲಾಗಿದ್ದ “ಚಿಗುರು” ಪತ್ರಿಕೆ ಹಾಗೂ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಬರೆಯುವವರ ಸಂಖ್ಯೆ ಬಹಳ ಕಡಿಮೆಯಿದೆ, ಹೆಚ್ಚು ಒದಿದಾಗ ಮಾತ್ರ ಪ್ರಬುದ್ದವಾಗಿ ಬರೆಯಲು ಸಾಧ್ಯ, ಹೊಸದಾಗಿ ಬರೆಯುವವರು ತಮ್ಮ ದೈನಂದಿನ ಬದುಕಿನ ಘಟನೆಗಳನ್ನು ವಸ್ತುವನ್ನಾಗಿಸಬೇಕು. ಬೇರೆಯವರ ಅನಾವಶ್ಯಕ ಭಯವನ್ನು ಬದಿಗೊತ್ತಿ ನಮ್ಮ ಆಂತರಿಕ ಸ್ಪಷ್ಟತೆಗಾಗಿ ಬರೆಯಬೇಕಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನದ ಮಾರ್ಗದರ್ಶನದಲ್ಲಿ ಬರೆಯುವ ಕಲೆಯನ್ನು ಕರಗತಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದಪ್ರಾಂಶುಪಾಲರಾದ ಡಾ.ಎಸ್.ಆರ್.ಅಂಜನಪ್ಪ ಪತ್ರಿಕೋದ್ಯಮವು ಸಮಾಜದ ವೈದ್ಯನಂತೆ ಕಾರ್ಯವನ್ನು ನಿರ್ವಹಿಸಬೇಕಿದೆ, ಪ್ರಜಾಪ್ರಭುತ್ವದ ಕಾವಲುಗಾರನಾಗಿರುವ ಪತ್ರಿಕಾರಂಗ ನೊಂದವರ ನೋವನ್ನು ಹೇಳುವ ಸಾಧನವಾಗಬೇಕು. ಬದ್ದತೆ ಹಾಗೂ ಆಳವಾದ ಜ್ಞಾನ ಇದ್ದರೆ ಮಾತ್ರ ಉತ್ತಮ ಬರಹಗಾರನಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದಿರುವ ಚಿಗುರು ಪತ್ರಿಕೆ ಮುಂದೆ ಬೆಳೆದು ಹೆಮ್ಮರವಾಗಲಿ, ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲತೆ ಮೈಗೂಡಿಸಿಕೊಂಡು ಅತ್ಯುತ್ತಮ ಪತ್ರಕರ್ತರಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಕೋಶದ ಸಹ ಸಂಚಾಲಕ ನಟರಾಜ್.ಜಿ.ಆರ್, ಪತ್ರಾಂಕಿತ ವ್ಯವಸ್ಥಾಪಕರಾದ ಗೀತಾದೇವಿ.ಟಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಪೆÇ್ರ.ಗಿರಿಸ್ವಾಮಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಲತಾ, ಹಾಗೂ ಪ್ರಾಧ್ಯಾಪಕರಾದ ಲೋಲಕ್ಷಿ, ರಿಹಾನಬಾನು, ಹುಚ್ಚಂಗಿ ಪ್ರಸಾದ್, ಕು.ಲಕ್ಷ್ಮಿ ಆರ್, ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *