ಹೊನ್ನಾಳಿ ಜುಲೈ 28 ತಾಲೂಕು ವಕೀಲರ ಸಂಘದ ವತಿಯಿಂದ ಇಂದು ಜನನ ಮತ್ತು ಮರಣ ನೋಂದಣಿಯ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ನಂಬರ್ ಪಿಡಿಎಸ್ 66 ಎಸ್ ಎಸ್ಎಂ 2022ನೇ ದಿನಾಂಕ 18/7/22ರ ಆದೇಶವನ್ನು ವಾಪಸ್ ಪಡೆದು ,
ಹಿಂದಿನಂತೆ ಜೆ ಎಂ ಎಫ್‌ಸಿ ನ್ಯಾಯಾಲಯಕ್ಕೆ ಅಧಿಕಾರ ನೀಡುವಂತೆ ಒತ್ತಾಯಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಉಮಕಾಂತ್ ಜೋಯಿಸ್ ನಂತರ ಮಾತನಾಡಿ ,ಜನನ ಮತ್ತು ಮರಣ ನೊಂದಣಿ ಸಂಬಂಧ ವಿವಾದಗಳು ಏರ್ಪಟ್ಟಲ್ಲಿ ಅಥವಾ ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಸಾರ್ವಜನಿಕರು ಜನನ ಮತ್ತು ನೋಂದಣಿಯ ಕಾಯ್ದೆ ಕಲಂ 13ರ ಪ್ರಕಾರ ಸ್ಥಳೀಯ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ, ದಾಖಲೆಗಳನ್ನು ನೀಡಿ ನ್ಯಾಯಾಲಯದ ಆದೇಶದ ಬಂದ ನಂತರ ,ಸಂಬಂಧಪಟ್ಟ ಅಧಿಕಾರಿಗಳು ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ನೀಡುತ್ತಿದ್ದರು. ಆದರೆ ರಾಜ್ಯ ಸರ್ಕಾರ ನ್ಯಾಯಾಲಯದ ಅಧಿಕಾರವನ್ನು ತೆಗೆದುಹಾಕಿ ಉಪವಿಭಾಗಾಧಿಕಾರಿಗಳ ನ್ಯಾಯಾಂಗಕ್ಕೆ ನೀಡಿದೆ.ಹಾಗಾಗಿ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಕಕ್ಷಿದಾರರಿಗೆ ತೊಂದರೆ ಆಗುವುದರಿಂದ ಹಾಗೂ ರೆವಿನ್ಯೂ ನ್ಯಾಯಾಲಯಗಳಲ್ಲಿ ಪ್ರಭಾವ .ಅಸಂಬದ್ಧ ಆದೇಶ ನೀಡುವ ಮೂಲಕ ಕಕ್ಷಿದಾರರಿಗೆ ಸೂಕ್ತ ನ್ಯಾಯ ದೊರೆಯುತಿಲ್ಲ. ಒಂದೊಮ್ಮೆ ಉಪ ವಿಭಾಗ ಅಧಿಕಾರಿಗಳ ನ್ಯಾಯಾಲಯಕ್ಕೆ ಅಧಿಕಾರ ನೀಡಿದ್ದಲ್ಲಿ ಸುಮಾರು 80 ರಿಂದ 100 ಕಿಲೋಮೀಟರ್ ದೂರದಿಂದ ಬರುವ ೆ ಕಕ್ಷಿದಾರರು ಎಸಿ ಕಚೇರಿಗೆ ಬಂದು ಅಲೆದಾಡಿ, ಸಮಯ ವ್ಯರ್ಥದ ಜೊತೆಗೆ ಸುಸ್ತಾಗುತ್ತಾರೆ . ಕೂಡಲೇ ಘನವೆತ್ತ ರಾಜ್ಯ ಸರ್ಕಾರ ಅಧಿಸೂಚನೆ ನಂಬರ್ ಪಿಡಿ ಎಸ್ 66 ಎಸ್ ಎಸ್ ಎಂ 20 22 ದಿನಾಂಕ 18.07.2022ರ ಕಾಯ್ದೆಯನ್ನು ಆದೇಶವನ್ನು ವಾಪಸ್ ಪಡೆದು ಈ ಹಿಂದೆ ಹಳೆಯ ಪದ್ಧತಿಯ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಅಧಿಕಾರವನ್ನು ಮುಂದುವರೆಸುವಂತೆ ಹೊನ್ನಾಳಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರುಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಕೂಡಲೆ ಮನವಿ ಪತ್ರವನ್ನು ಕಳಿಸಿಕೊಡುವಂತೆ ಒತ್ತಾಯಿಸಿ, ತಾಲೂಕು ಉಪ ವಿಭಾಗಾಧಿಕಾರಿಗಳಾದ ಹುಲ್ಲುಮನೆ ತಿಮ್ಮಣ್ಣನವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಉಮಾಕಾಂತ್ ಜೋಯಿಸ್, ಕಾರ್ಯದರ್ಶಿ ವೈಟಿ ರಾಮಚಂದ್ರಪ್ಪ, ಸಂಘದ ಸದಸ್ಯರುಗಳಾದ ಮಹಾಬಲೇಶ್ ,ಜಿ ಎಂ ಹನುಮಂತಪ್ಪ ,ರವಿಕುಮಾರ್ ಜಯಪ್ಪ ,ಈಶ್ವರನ್, ಸುನಿಲ್ ಕುಮಾರ್, ಚೇತನ್ ಕುಮಾರ್ ,ಜಯವರ್ಧನ್, ಸತೀಶ್ ಬಿ ಜಿ ,ಹಳದಪ್ಪ ಎಂ ಕೆ ,ರವಿ ನಾಯ್ಕ, ತಿಮ್ಮಪ್ಪ ಪಟೇಲ್ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *