ಹುಣಸಘಟ್ಟ: ವಿಕಲಚೇತನರ ಬಗ್ಗೆ ಅನುಕಂಪವನ್ನು ಪಡೆದ ಅವರಿಗೆ ಹೆಚ್ಚಿನ ಅವಕಾಶವನ್ನು ಒದಗಿಸಿಕೊಡಬೇಕು ಎಂದು ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್ ಎಸ್ ಕವಿತಾ ರಮೇಶ್ ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯತಿಯಲ್ಲಿ 2021-22ನೇ ಸಾಲಿನ ರೂ.1.57 ಲಕ್ಷ ರಾಜಧನ ಅನುದಾನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 58 ವಿಕಲಚೇತನ ಫಲಾನುಭವಿಗಳಿಗೆ ಸೋಲಾರ್ ಲ್ಯಾಂಪ್ ವಿತರಿಸಿ ಮಾತನಾಡಿ ಪ್ರತಿಯೊಬ್ಬರನ್ನು ವಿಶೇಷ ಕೌಶಲ್ಯ ಪ್ರತಿಭೆ ಇರುತ್ತದೆ.
ಹಾಗೆಯೇ ವಿಕಲಾಂಗ ರಲ್ಲೂ ಇದೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ನೆಮ್ಮದಿ ಜೀವನ ನಡೆಸಬೇಕೆಂದರು.
ಸೋಲರ್ ವಿತರಣಾ ಕಾರ್ಯಕ್ರಮದಲ್ಲಿ. ಅಭಿವೃದ್ಧಿ ಅಧಿಕಾರಿ ಸಿ ರಾಮನಗೌಡ, ಗ್ರಾ ಪಂ ಉಪಾಧ್ಯಕ್ಷ ಲೋಹಿತ್, ಸದಸ್ಯರುಗಳಾದ
ಹಾಲಪ್ಪ, ಬಿವೈರಾಜು, ಮಹೇಂದ್ರ, ಕವಿತಾ ಮಂಜಪ್ಪ, ಪಾರ್ವತಮ್ಮ ಬಸವಂತಪ್ಪ, ಶ್ವೇತ ಬಸವರಾಜಪ್ಪ, ಶೋಭ ಗಾಳಿ ಹಾಲಪ್ಪ, ವಿ ಆರ್ ಡಬ್ಲ್ಯೂ ಕಾರ್ಯಕರ್ತ ಟಿ ಹನುಮಂತಪ್ಪ ಬೀರಗೊಂಡನಹಳ್ಳಿ, ಹಿರೇಬಾಸೂರು, ಉಜನೀಪುರ, ಸದಾಶಿವ ಪುರ, ಉಜನೀಪುರ ಕ್ಯಾಂಪ್ ನ ವಿಕಲಚೇತನರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *