ಹೊನ್ನಾಳಿ ಜುಲೈ 28 ತಾಲೂಕು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇಂದು ಹೊನ್ನಾಳಿ ತಾಲೂಕು ಯುವ ಬಿಜೆಪಿ ಮೋರ್ಚಾ ಮತ್ತು ಎಸ್ ಸಿ ಮೋರ್ಚಾದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರವೀಣ ನೆಟ್ಯಾರ್ ಕಾರ್ಯಕರ್ತನನ್ನ ಬರ್ಬರ ವಾಗಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿ ,ಪ್ರವೀಣ್ ನೆಟ್ಟರ್ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ಎರಡು ನಿಮಿಷಗಳ ಕಾಲ ಮೌನಚರಣೆಯನ್ನು ಆಚರಿಸಲಾಯಿತು. ಒಟ್ಟಾಗಿ ಬಿಜೆಪಿಯ ಕಾರ್ಯಕರ್ತರ ಒತ್ತಾಯ ಪ್ರವೀಣ್ ನೆಟ್ಯಾರ್ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳನ್ನು ಕೂಡಲೇ ಬಂದಿಸಿ ಅವರನ್ನು ಎನ್ಕೌಂಟರ್ ಮಾಡಬೇಕೆಂದು ತಮ್ಮದೇ ಬಿಜೆಪಿ ಸರ್ಕಾರದ ಗೃಹ ಸಚಿವ ಅರಗ ಜ್ಞಾನೇಂದ್ರ ರವರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್ ಬಿಜೆಪಿ ತಾಲೂಕ ಅಧ್ಯಕ್ಷ ಜೆ ಕೆ ಸುರೇಶ್, ಯುವ ಅಧ್ಯಕ್ಷ ವಿಕಾಸ್ ಕುಂಬಳೂರ್. ಎಸ್ ಸಿ ಮೋರ್ಚಾ ಅಧ್ಯಕ್ಷ ಉಮೇಶ್ ಬೆಲೆ ಮಲ್ಲೂರ್. ವಿಜಯ್ ಕುಮಾರ್ ಪಟ್ಟಣಶೆಟ್ಟಿ .ಗೂಳಿ ಪ್ರವೀಣ್. ಪುರಸಭೆಯ ಅಧ್ಯಕ್ಷ ರಂಗಪ್ಪ. ಇನ್ನು ಮುಂತಾದ ಬಿಜೆಪಿ ಕಾರ್ಯಕರ್ತರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *