ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮೂಲಭೂತ ಸೌಲಭ್ಯಗಳ ಕೊರತೆ ಎಷ್ಟು ಪ್ರಯತ್ನಿಸಿದರೂ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆ, ನಗರದ ಅನೇಕ ಕಡೆಗಳಲ್ಲಿ ರಸ್ತೆ, ಚರಂಡಿಗಳಿಲ್ಲದೆ ಜನ ಗೋಳಾಡುತ್ತಿದ್ದಾರೆ ಆದರೆ ಇಲ್ಲೊಂದು ಸಿಸಿ ರಸ್ತೆ ಮಾತ್ರ ನಾನು ಆರೋಗ್ಯವಾಗಿದ್ದರು (ಚೆನ್ನಾಗಿದ್ದರು) ನನ್ನನ್ನು ಸಾಯಿಸಲಾಗುತ್ತಿದೆ (ಹೊಡೆದು ಹಾಕಿ) ಮತ್ತೆ ಸಿಸಿ ರಸ್ತೆ ಮಾಡಿಸಲಾಗುತ್ತಿದೆ ಎಂದು ಕಣ್ಣೀರು ಹಾಕುತ್ತಿರುವ ದೃಶ್ಯ ಮಾತ್ರ ನಗರ ಪಾಲಿಕೆ ವ್ಯಾಪ್ತಿಯ ಹತ್ತನೇ ವಾರ್ಡಿನಲ್ಲಿ ಕಾಣುತ್ತಿದೆ.
ಪಾಲಿಕೆ ಇಂಜಿನಿಯರ್ ಗಳು ರಸ್ತೆ ಕಾಮಗಾರಿಗೆ ಅನುಮೋದನೆ ನೀಡುವ ಮೊದಲು ಸ್ಥಳಪರಿಶೀಲನೆ ಮಾಡಿ ಅನುಮೋದನೆ ನೀಡಲಾಗುತ್ತದೆ ಎಂದು ಭಾವಿಸಲಾಗಿತ್ತು ಆದರೆ ಇಲ್ಲಿಯ ಇಂಜಿನಿಯರ್ ಗಳು ಸ್ಥಳ ಪರಿಶೀಲಿಸಿದರೋ??? ಅಥವಾ ಗುತ್ತಿಗೆದಾರರ ಜೇಬು ಪರಿಶೀಲಿಸಿದರೋ???? ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆ ಕಬ್ಬಿಣ ಹಾಗೂ ಸಿಮೆಂಟ್ ನಿಂದ ಮಾಡಿದ್ದ ರಸ್ತೆಯಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದ್ದು ಇಂತಹ ರಸ್ತೆಯನ್ನು ಹೊಡೆದು ಹಾಕಿ ಮತ್ತೆ ರಸ್ತೆ ಮಾಡುವ ಬದಲು ನೇರವಾಗಿ ಸಂಬಂಧ ಪಟ್ಟವರಿಗೆ ಹಣ ಸಂದಾಯ ಮಾಡಿದರೆ ರಸ್ತೆ ಒಡೆಯುವುದು, ಮತ್ತೆ ರಸ್ತೆ ಮಾಡುವುದು ಇದರಿಂದಾಗುವ ಕಿರಿಕಿರಿಯಿಂದ ನಾವು ಬಚಾವಾಗಬಹುದು ಎಂದು ಹೆಸರು ಹೇಳಲು ಇಚ್ಚಿಸದ ಸ್ಥಳೀಯ ನಾಗರಿಕರು ತಮ್ಮ ಗೋಳನ್ನು ತೋಡಿಕೊಂಡರು.
ಶಾಸಕರ, ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅವಶ್ಯಕತೆ ಇರುವ ಚರಂಡಿ, ಸಿಸಿ ರಸ್ತೆ ಮಾಡಲು ಏನ್ ಓ ಸಿ ಕೇಳಿದರೆ ಸ್ಥಳ ಪರಿಶೀಲನೆ, ಕಚೇರಿ ಕೆಲಸ, ಅಧಿಕಾರಿಗಳ ಅನುಮೋದನೆ ಎಂದು ತಿಂಗಳು ಗಂಟಲೆ ಸತಾಯಿಸುವ ಇಂಜಿನಿಯರ್ ಗಳು, ಇಂತಹ ಗುಣಮಟ್ಟದ ರಸ್ತೆಗಳಿದ್ದರೂ ಸಹ ಮತ್ತೆ ರಸ್ತೆ ಮಾಡಲು ಹೇಗೆ ಅವಕಾಶ ನೀಡಿದರು ಎಂಬುದೇ ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದ್ದು ಇದಕ್ಕೆ ಸಂಬಂಧಪಟ್ಟ ಪಾಲಿಕೆ ಸದಸ್ಯರೇ ಉತ್ತರ ನೀಡಬೇಕಾಗಿದೆ.
ಕೆ.ಎಲ್.ಹರೀಶ್ ಬಸಾಪುರ.