ಹೊನ್ನಾಳಿ : ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾದರಿಯಲ್ಲಿ ಕಠಿಣ ಶಿಕ್ಷೆ ನೀಡಿದರೆ ಸಾಲದು, ಯಾರು ದುಶ್ಕøತ್ಯ ಮಾಡಿದ್ದಾರೋ ಅವರನ್ನು ಎನ್‍ಕೌಂಟರ್ ಮಾಡುವುದರ ಜೊತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಬಿವಿಪಿ ಸದಸ್ಯರುಗಳು, ಹಿಂದೂಯುವಕರು, ನಮ್ಮ ಪಕ್ಷದ ಮುಖಂಡರ ಕ್ಷಣೆ ಕೇಳುವುದರ ಜೊತೆಗೆ ಮನವಿ ಮಾಡುತ್ತೇನೆ, ನಾವು ನಿಮ್ಮ ಜೊತೆಗೆಗಿದ್ದೇವೆ ಎಂದರು.
ಇದು ನೀವು ಆಯ್ಕೆ ಮಾಡಿದ ಸರ್ಕಾರ, ನೀವು ಆಯ್ಕೆ ಮಾಡಿದ ಸಿಎಂ ಕಳೆದ ಮೂರು ನಾಲ್ಕು ದಿನಗಳಿಂದ ಸಿಎಂ ಸರಿಯಾಗಿ ನಿದ್ದೇ ಮಾಡಿಲ್ಲಾ, ತುಂಬಾ ನೋವಿನಲ್ಲಿದ್ದಾರೆಂದ ಶಾಸಕರು, ನಾನು ರಾಜಿನಾಮೆ ಕೊಡುತ್ತೇನೆಂದಾಗ ಸಿಎಂ ನೀವು ಸರ್ಕಾರದ ಒಂದು ಭಾಗ ನೀವು ನನ್ನ ಜೊತೆ ನಿಲ್ಲುವಂತೆ ಹೇಳಿದರಲ್ಲದೇ ರಾಜಿನಾಮೆ ಕೊಡದಂತೆ ಹೇಳಿದ್ದು,
ಸಮಾಜ ಘಾತುಕ ಶಕ್ತಿಗಳಿಗೆ ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ ಎಂದ ಶಾಸಕರು ಬರಿ ಅದು ಬಾಯಿ ಮಾತು ಆಗ ಬಾರದು ಯಾರು ಸಮಾಜ ಘಾತುಕ ಶಕ್ತಿಗಳಿದ್ದವೋ ಅವುಗಳನ್ನು ಎನ್‍ಕೌಂಟರ್ ಮಾಡ ಬೇಕೆಂದು ಮನವಿ ಮಾಡುತ್ತೇವೆಂದರು.
ಪ್ರವೀಣ್ ಹತ್ಯೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ, ಅಲ್ಲದೇ ಈಗಾಗಲೇ ಸಿಎಂ ಪ್ರವೀಣ್ ಹತ್ಯೆಯನ್ನು ರಾಷ್ಡ್ರೀಯ ತನಿಖಾ ಸಂಸ್ಥೆಗೆ ವಹಿಸಿದ್ದಾರೆ ಎಂದ ಶಾಸಕರು, ಯುವಕರು ಮತ್ತು ನಮ್ಮ ಪಕ್ಷದ ಮುಖಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದರು.
ನಮ್ಮ ಯುವಕರಲ್ಲಿ ಹಿಂದೆ ಹರ್ಷ, ಇಂದು ಪ್ರವೀಣ್, ನಾಳೆ ಯಾರೋ ಎಂದು ಭಯ ಭೀತರಾಗಿದ್ದು, ಯಾರೂ ಕೂಡ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದ ಶಾಸಕರು,
ನಿಮ್ಮ ಜೊತೆ ನಮ್ಮ ಸಂಘಟನೆ ನಮ್ಮ ಪಕ್ಷ ಇದೇ ಎಂದರು.
ನಾನು ಎಲ್ಲಾ ತ್ಯಾಗಕ್ಕೂ ಸಿದ್ದನಿದ್ದೇನೆ, ಸರ್ಕಾರದ ಒಳಗಿದ್ದು ಸಮಾಜಘಾತುಕ ಶಕ್ತಿಗಳನ್ನು ಎಡೆಮುರಿ ಕಟ್ಟುವ ಕೆಲಸ ಮಾಡುತ್ತೇವೆಂದು ಪ್ರತಿಜ್ಞೆ ಮಾಡುತ್ತೇನೆಂದ ಶಾಸಕರು ನೀವು ಯಾವುದೇ ಕಾರಣಕ್ಕೂ ಕಾನೂನು ಕೈತೆಗೆದುಕೊಳ್ಳ ಬೇಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಇಂತಹ ಸಂದರ್ಭದಲ್ಲಿ ನಾವು ರಾಜಿನಾಮೆ ಕೊಡ ಬೇಕೆಂದು ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲಾ. ಕಾರ್ಯಕರ್ತನಾಗಿ ಕಾಂಗ್ರೇಸ್‍ಗೆ ಆಹಾರವಾಗುತ್ತೇ ಎಲ್ಲಿ ಮಾತನಾಡ ಬೇಕೋ ಅಲ್ಲಿ ಮಾತನಾಡುತ್ತೇನೆ ಎಂದರು.
ಸಿದ್ದರಾಮಯ್ಯನವರು ಪ್ರತಿಪಕ್ಷದ ನಾಯಕರು ನಿಮಗೆ ಆಡಳಿತದ ಅನುಭವವಿದೆ ನೀವು ರಾಜಿನಾಮೆ ಕೇಳಲು ಏನು ನೈತಿಕತೆ ಇದೇ ಎಂದ ಶಾಸಕರು, ನಿಮ್ಮ ಸರ್ಕಾರ ಇದ್ದಾಗ ರೈತರ ಆತ್ಮಹತ್ಯೆ, 30 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು, ಆಗ ಅವರ ಮನೆಗೆ ಹೋಗಿ ಸಾಂತ್ವಾನ ಕೂಡೆ ಹೇಳದ ನೀವು, ಸಮಾಜಘಾತುಕ ಶಕ್ತಿಗಳ ಮೇಲೆ ಹಾಕಿದ್ದ ಪ್ರಕರಣವನನ್ನು ಸಚಿವ ಸಂಪುಟದಲ್ಲಿ ವಾಪಸ್ದು ಪಡೆದಿದ್ದೀರಿ ಎಂದರು.
ಇಲ್ಲಿ ಆರೋಪ ಪತ್ಯಾರೋಪ ಬೇಡ ನಿಮಗೆ ಹಿಂದುತ್ವದ ಬಗ್ಗೆ ಅಭಿಮಾನ ಇದ್ದರೇ ನೀವು ಮೊದಲು ಸಿಎಂ ಅವರ ಜೊತೆ ನಾವಿದ್ದೇವೆ ಎನ್‍ಕೌಂಟರ್ ಮಾಡಿ ಹೇಳಿ ಅದನ್ನು ಬಿಟ್ಟು ರಾಜಿನಾಮೆ ಕೊಡಿ ಎಂದು ಹೇಳುತ್ತೀರಿ, ನಿಮಗೆ ಸಿಎಂ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ ಮೊದಲು ನೀವು ನಿಮ್ಮ ಮನೆಯಲ್ಲಿರುವ ಒಳಜಗಳ ಸರಿ ಮಾಡಿಕೊಳ್ಳಿ ನಿಮ್ಮ ಜಗಳ ವಿಷಯಾಂತರ ಮಾಡಲು ಈ ರೀತಿ ಹೇಳಿಕೆ ನೀಡುವುದು ಸರಿ ಇಲ್ಲಾ ಇದನ್ನು ತಳ್ಳಿ ಹಾಕುತ್ತೇವೆ ಎಂದರು.