ಮಾನ್ಯ ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ
ಸಚಿವರಾದ ಬಿ.ಎ ಬಸವರಾಜ(ಭೈರತಿ) ಇವರು ಆಗಸ್ಟ್ 2022ರ
ಮಾಹೆಯಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಆ.01 ರಂದು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು ಬೆ.10.15ಕ್ಕೆ
ದಾವಣಗೆರೆ ಜಿ.ಎಂ.ಐ.ಟಿ ಹೆಲಿಪ್ಯಾಡ್ಗೆ ಆಗಮಿಸುವರು. ನಂತರ
ಬೆ.10.30ಕ್ಕೆ ವೆಂಕಭೋವಿ ಕಾಲೋನಿ, ಅರಳೀಮರದ ಸರ್ಕಲ್
ದಾವಣಗೆರೆ ಇಲ್ಲಿ ಆಯೋಜಿಸಲಾಗಿರುವ ಶ್ರೀಸಿದ್ದರಾಮೇಶ್ವರ
ರಥ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ
ಮುಖ್ಯಮಂತ್ರಿಯವರೊಂದಿಗೆ ಭಾಗವಹಿಸುವರು.
ಕಾರ್ಯಕ್ರಮದ ನಂತರ ಬೆ.11.15ಕ್ಕೆಆನೆಗುಂದಿಗೆ
ತೆರಳುವರೆಂದು ಅವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.