ಹುಣಸಘಟ್ಟ: ಶಿಕ್ಷಕರ ವೃತ್ತಿ ಪವಿತ್ರವಾದದ್ದು. ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು, ಶ್ರೇಷ್ಠ ಸೇವೆ, ಶಿಕ್ಷಕ ಸಮುದಾಯದವರು ಎಲ್ಲಾ ಕ್ಷೇತ್ರಗಳನ್ನು ಬಳಸುವಂತಹ ಗಾರುಡಿಗರು ಎಂದು ಸಾಸ್ವೆಹಳ್ಳಿ ಪ್ರಥಮ ದರ್ಜೆ ಕಾಲೇಜ್ ಸಂಸ್ಥಾಪಕ ಕಾರ್ಯದರ್ಶಿ ಡಾ. ಎಸ್ ಎಚ್ ಕೃಷ್ಣಮೂರ್ತಿ ಹೇಳಿದರು.p
ಹೋಬಳಿ ಸಾಸ್ವೆಹಳ್ಳಿ ಯ ಎಡಿವಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ಅರ್ಥಶಾಸ್ತ್ರ ಉಪನ್ಯಾಸಕ ಹೆಚ್ ಕೆ ಬಸವರಾಜಪ್ಪ ನವರ ವಯೋನಿವೃತ್ತಿ ಹಾಗೂ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ನೆರವೇರಿಸಿ ಮಾತನಾಡಿದ ಅವರು ಶಿಕ್ಷಕರ ಹುದ್ದೆ ಇದೊಂದು ಸಾಮಾಜಿಕ ಬದಲಾವಣೆ ತರುವಂತಹ ಹುದ್ದೆಯಾಗಿದೆ. ಈ ಸೇವೆ ಸಿಗುವುದು ತುಂಬಾ ಅದೃಷ್ಟವಂತರಿಗೆ. ಕಠಿಣ ಪರಿಶ್ರಮಿಗಳು ಮತ್ತು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ನಮ್ಮ ಜೀವನ ಕಟ್ಟಿಕೊಳ್ಳುವ ವ್ಯಕ್ತಿಗಳಿಗೆ ಒಲಿದಿದೆ. ಆ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಪ್ರತಿಕ್ಷಣವು ಕಲ್ಪಿಸುವ ಆಸಕ್ತಿ ಇಮ್ಮಡಿ ಗೊಳಿಸಿಕೊಳ್ಳಬೇಕು ಎಂದರು.
ನಿವೃತ್ತ ಉಪನ್ಯಾಸಕ ಎಚ್ ಕೆ ಬಸವರಾಜಪ್ಪ ನಿವೃತ್ತಿ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳ ಕಣ್ಣಂಚಿನ ನೀರು, ಉಪನ್ಯಾಸಕ ವರ್ಗದವರ ಬಾಂಧವ್ಯ, ನಿವೃತ್ತಿ ಉಪನ್ಯಾಸಕರ ಸ್ನೇಹಮಿಲನ, ಸಂಸ್ಥೆಯವರ ಸ್ವಾಮಿನಿಷ್ಠೆ ಎಲ್ಲವನ್ನು ಒಮ್ಮೆ ವೀಕ್ಷಿಸಿ, ಕಂಬನಿ ಮಿಡಿದು ನಿವೃತ್ತಿ ವೃತ್ತಿ ವರ್ಗಕ್ಕಷ್ಟೇ ಹೊರತು, ಅಂತರಂಗದಲ್ಲಿ ನಾವೆಲ್ಲರೂ ಹತ್ತಿರವಾಗಿರೋಣ. ಶಿಕ್ಷಕರು ಬದುಕಿಗಿಂತ ಉದ್ಯೋಗ ದೊಡ್ಡದು ಎಂದು ತಿಳಿಯಬಾರದು ನಾವು ನಮ್ಮ ಉದ್ಯೋಗವನ್ನು ಜೀವನದ ಒಂದು ಭಾಗವಾಗಿ ನೋಡಬೇಕೆ ಹೊರತು ಜೀವನ ವನ್ನಾಗಿ ನೋಡಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಚ್ ಬಿ ಗಣಪತಿ ವಯಸ್ಸಿ ಮಾತನಾಡಿದರು. ಹನುಮಂತಪ್ಪನವರು ಪ್ರಾಸ್ತಾವಿಕವಾಗಿ ನುಡಿದರು. ಕಾಲೇಜ್ ಸಂಸ್ಥಾಪಕ ಅಧ್ಯಕ್ಷ ಶಾಂತ ಕೃಷ್ಣಮೂರ್ತಿ, ಬೇರೆ ಬೇರೆ ಕಾಲೇಜಿನ ನಿವೃತ್ತ ಉಪನ್ಯಾಸಕ ರಾದ ಚಾಮರಾಜ್, ನರಸಪ್ಪ, ಮರಿಗೌಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎ ಗದ್ದಿಗೇಶ್, ಉಪನ್ಯಾಸಕರಾದ ಚಂದ್ರಪ್ಪ ಹುಡೆದ್, ವನಜಾಕ್ಷಮ್ಮ, ಪ್ಯಾಟಿ, ಹರೀಶ್, ಶಂಕ್ರಪ್ಪ ಉಪಸ್ಥಿತರಿದ್ದರು.