ನ್ಯಾಮತಿ ಆಗಸ್ಟ್ 1 ತಾಲೂಕಿನ ಗೋವಿನ ಕೊವಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಮತ್ತು ಎಸ್‌ಡಿಎಂಸಿ ಹಾಗೂ ಗೋವಕವಿ ಗ್ರಾಮದ ಹಿರಿಯರ ಸಹಕಾರದೊಂದಿಗೆ ಪ್ರೌಢಶಾಲೆ ಆವರಣದಲ್ಲಿ ಇಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಸರಸ್ವತಿಯ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ಈ ಮೂರ್ತಿಯ ಪ್ರತಿಷ್ಠಾಪನೆಯ ಪೂಜೆ ಕೈಂ ಕಾರ್ಯವನ್ನು ಹಾಲಸ್ವಾಮಿಯವರು ನೆರವೇರಿಸಿದರು.
ಇದರ ಉದ್ಘಾಟನೆಯನ್ನು ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯರವರು ಪುಷ್ಪ ನಮನವನ್ನು ಮಾಡುವುದರ ಮುಖೇನ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ನೆರವೇರಿಸಿದರು.
ಪ್ರಾರ್ಥನೆಯನ್ನು ಹಿಂದುಸ್ತಾನಿ ಸಂಗೀತ ಶಿಕ್ಷಕರಾದ ರಾಮಲಿಂಗಪ್ಪ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆ ನಡೆಸಿಕೊಟ್ಟರು .
ಸ್ವಾಗತವನ್ನು ದೈಹಿಕ ಶಿಕ್ಷಕರಾದ ಜಿನಳ್ಳಿ ಕೆ ಯವರು ನಡೆಸಿಕೊಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮಂಜುನಾಥ್ ನಂತರ ಮಾತನಾಡಿ ಗೋವಿನ ಕೋವಿ ಗ್ರಾಮಸ್ಥರು ಧ್ವಜಸ್ಥಂಭವನ್ನು ಈ ಹಿಂದೆ ಸ್ಥಾಪಿಸಿದ್ದರು, ಈಗ ಸರಸ್ವತಿ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಿದ್ದು ಬಹಳ ಸಂತೋಷದ ವಿಷಯ ಗೋವಿನ ಕೋವಿ ಗ್ರಾಮಸ್ಥರಿಗೆ ಧನ್ಯವಾದಗಳು ತಿಳಿಸಿದರು. ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಮೂರ್ತಿಯ ಪ್ರತಿಷ್ಠಾಪನೆ ಮಾಡುವುದೇ ಒಂದೇ ಅಲ್ಲ ಅದರ ರಕ್ಷಣೆ ಕೂಡ ಜವಾಬ್ದಾರಿಯವಾಗಿರುತ್ತದೆ ಹಾಗಾಗಿ ವಿದ್ಯಾರ್ಥಿಗಳು ಸರಸ್ವತಿಯ ಮೂರ್ತಿಯನ್ನು ಆರಾಧನೆ ಮಾಡುವುದರ ಮೂಲಕ ವಿದ್ಯಾಭ್ಯಾಸವನ್ನು ಕಟೀಣ.ರೀತಿಯಲ್ಲಿ ಅಭ್ಯಾಸವನ್ನು ಮಾಡಿ ಈ ಬಾರಿ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗುಣಮಟ್ಟದ ಜೊತೆಗೆ ಅತಿ ಹೆಚ್ಚು ಅಂಕವನ್ನು ಗಳಿಸುವುದರೊಂದಿಗೆ ಈ ಶಾಲೆಗೆ ಹೆಸರು ತಂದು ಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಸಕರಾದ ಎಂಪಿ ರೇಣುಕಾಚಾರ್ಯ ಅವರು ಮಾತನಾಡಿ ಗೋವಿನ ಕೋವಿ ಯಲ್ಲಿ ಪ್ರಥಮವಾಗಿ ಸರಸ್ವತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು ಹೊನ್ನಾಳಿ ತಾಲೂಕಿನಲ್ಲಿ ಇದೇ ಮೊದಲ ಸರಸ್ವತಿ ದೇವಿಯು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೆ ದಿನನಿತ್ಯ ವಿದ್ಯಾಭಂಗ ಬಾರದೇ ಇರಲಿ ಪ್ರತಿಯೊಂದು ವಿದ್ಯಾರ್ಥಿಗೂ ವಿದ್ಯಾದೇವತೆ ಸರಸ್ವತಿಯು ಸದಾ ಆಶೀರ್ವಾದ ಸದಾ ಅವರ ಮೇಲೆ ಇರಲಿ ಎಂದು ಪ್ರಾರ್ಥಿಸಿದರು. 2022_ 23ನೇ ಸಾಲಿನ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಈ ಶಾಲೆಗೆ ಮತ್ತು ನಿಮ್ಮ ತಂದೆ ತಾಯಿಯವರಿಗೆ ಕೀರ್ತಿಯನ್ನು ತಂದುಕೊಡುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಶಿಕಲಾ ಎಚ್ಎಂ ಉಪಾಧ್ಯಕ್ಷರಾದ ಶ್ವೇತ ಕ್ಷೇತ್ರ ಶಿಕ್ಷಣಾಧಿಕಾರಿಯದ ಮಂಜುನಾಥ ಸ್ವಾಮಿ ಗ್ರಾಮ ಪಂಚಾಯತ್ ಸದಸ್ಯರಾದ ಹಾಲೇಶಪ್ಪ ವಿ ಎಚ್. ರುದ್ರೇಶ್. ಸತೀಶ್ ಎ. ಜಿ ಬಿ ರಮೇಶ್. ಎಸ್ ಜಯಪ್ಪ ,ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ವಿ ರಾಮಪ್ಪ, ನಿರಂಜನ ಮೂರ್ತಿ ಮುಖ್ಯ ಶಿಕ್ಷಕರಾದ ರಮೇಶ್ ಮತ್ತು ಗೋಕವಿ ಗ್ರಾಮದ ಗ್ರಾಮಸ್ಥರು ಹಿರಿಯ ಮುಖಂಡರು ಹಾಗೂ ಶಿಕ್ಷಕರು ಆ ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದರು.