ಸೋಮವಾರ ನಗರದ ಎಸ್.ಎಸ್ ಬಡಾವಣೆಯ ರಾಘವೇಂದ್ರ ಹೈಟೆಕ್ ಪದವಿ ಪೂರ್ವ ಕಾಲೇಜ್‍ನಲ್ಲಿ ಡಾ|| ಮಹಾಂತ ಶಿವಯೋಗಿ ಸ್ವಾಮಿಗಳ ಇಳಕಲ್ ಮಠ ಇವರ ಜನ್ಮ ದಿನಾಚರಣೆ ಪ್ರಯುಕ್ತ “ವ್ಯಸನ ಮುಕ್ತ ದಿನಾಚರಣೆ”ಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್ ರವರು ಮತನಾಡಿ, ಲಿಂಗೈಕ್ಯ ಡಾ|| ಮಹಾಂತ ಶಿವಯೋಗಿ ಸ್ವಾಮಿಗಳ ವ್ಯಸನ ಮುಕ್ತ ಸಮಾಜ ಮಾಡುವ ನಿಟ್ಟಿನಲ್ಲಿ ವ್ಯಸನ ಮಾಡುವ ಜನರಿಂದ ವ್ಯಸನದ ಪದಾರ್ಥಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಸಿಕೊಂಡು ವ್ಯಸನ ಮುಕ್ತ ಸಮಾಜ ಮಾಡುವ ವಿವಿಧ ಅಯಾಮಗಳನ್ನು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮಾಜ ಕಾರ್ಯಕರ್ತರಾದ ಕೆ.ಪಿ ದೇವರಾಜ್, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕರ ಕುರಿತು ಕಾಲೇಜ್‍ನ ವಿದ್ಯಾರ್ಥಿಗಳಿಗೆ ಸಿಬ್ಬಂದಿಗೆ ಉಪನ್ಯಾಸ ನೀಡಿ, ತಂಬಾಕಿನ ದುಷ್ಪರಿಣಾಮಗಳು & ತಂಬಾಕು ವ್ಯಸನ ಮುಕ್ತ ಕೇಂದ್ರದ ಬಗ್ಗೆ ಅರಿವು ಮೂಡಿಸಿದರು.
ಶಾರದ ಮೆಡಿಕಲ್ ಅಕಾಡೆಮಿಯ ಪ್ರಾಂಶುಪಾಲರಾದ ಡಾ||ಅನಿಲ್ ಕುಮಾರ್ ಎಂ.ಆರ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರತಿ ವಿದ್ಯಾರ್ಥಿಗಳು ಮಾದಕ ವಸ್ತುಗಳು ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ತಂಬಾಕು ವರ್ಜಿಸಲು ವ್ಯಸನ ಮುಕ್ತ ಕೇಂದ್ರದ ಉಪಯೋಗ ಪಡೆದುಕೊಂಡು ವ್ಯಸನ ಮುಕ್ತ ಸಮಾಜ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿಯದಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ನಮೀತ ಆರ್.ಎಲ್, ಹಿಂದೂಶ್ರೀ ಎಸ್, ಹಸೀಮಾ, ಬಸವರಾಜ್ ಹಾಗೂ ಸಿಬ್ಬಂದಿಯವರು ಹಾಜರಿದ್ದರು
ಕಾಲೇಜಿನ  ಭೌತಶಾಸ್ತ್ರ ಉಪನ್ಯಾಸಕ ಕಿರಣ್ ಕುಮಾರ್  ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಪೂಜಾ ಎಂ.ಎಂ ಪ್ರಾರ್ಥನೆ ಹಾಡಿದರು, ಭಾವನಾ ನಿರೂಪಣೆ ಮಾಡಿದರು, ಸ್ವಾತಿ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *