ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ವತಿಯಿಂದ ದಾವಣಗೆರೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಹಾಗೂ ಉಪಾಧ್ಯಕ್ಷರಾಗಿ ಶಾಮೀರ್ ಆಲಮ್ ಖಾನ್, ಖಲೀಲ್ ಸಾಬ್, ಸೈಯದ್ ನೇಮಕೊಂಡಿದ್ದಾರೆ.
ಸಮಿತಿ ಸದಸ್ಯರಾಗಿ ಖಲೀಲ್ ಅಹಮದ್, ಜನಾಬ್ ಅಬುಸ್ವಾಲೇಹ, ಅಬ್ದುಲ್ ಜಬ್ಬಾರ್, ಸೈಯದ್ ಆಸಿಫ್ ಅಹಮದ್, ಮೊಹಸಿನ್ ಖಾನ್, ಫೈರೋಜ್ ಪಟೇಲ್, ಸೈಯದ್ ಮುಬೀನ್ ಆಯ್ಕೆಯಾಗಿರುತ್ತಾರೆ.
ಸಭೆಯಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಸಲೀಮ್ ಪಾಷ, ಸಮಾಜದ ಮುಖಂಡರಾದ ಸಾದಿಕ್ ಪೈಲ್ವಾನ್, ಇಜಾಜ್ ಅಹಮದ್, ಘನಿ ತಾಹಿರ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.