ಹೊನ್ನಾಳಿ : ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದ್ದು, ಹಾನಿಪೀಡತ ಪ್ರದೇಶಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶೀ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಬೆಳ್ಳಂಬೆಳ್ಳಗೆಯೇ ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತಿದ ಶಾಸಕರು, ಖುದ್ದು ಮಳೆಯಾಗಿಯ ಬಗ್ಗೆ ಮಾಹಿತಿ ಕಲೆ ಹಾಕಿದರಲ್ಲದೇ, ಅಧಿಕಾರಿಗಳು ಯಾವುದೇ ಕಾರಣಕ್ಕೂ ರಜೆ ಮೇಲೆ ತೆರಳದೇ ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಇಂದಿನಿಂದ ನನ್ನ ಎಲ್ಲಾ ಪ್ರವಾಸಗಳನ್ನು ರದ್ದು ಮಾಡಿದ್ದು, ಅವಳಿ ತಾಲೂಕಿನಾಧ್ಯಂತ ಓಡಾಟ ನಡೆಸಿ ಮಳೆ ಹಾನಿಯ ಬಗ್ಗೆ ಸಮಗ್ರ ವರದಿ ಪಡೆಯುವುದಾಗಿ ತಿಳಿಸಿದ ಶಾಸಕರು,ಅಧಿಕಾರಿಗಳು ಹಾನಿ ಪೀಡದ ಪ್ರದೇಶಗಳಿಗೆ ತೆರಳಿ ಜಂಟಿ ಸರ್ವೇ ಮಾಡಿ ಹಾನಿಯ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 175 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು 40 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದು, ಮನೆ ಹಾನಿಗೆ ಅನುಗುಣವಾಗಿ ಅವರಿಗೆ ಪರಿಹಾರ ನೀಡಲಾಗುವುದು ಎಂದ ಶಾಸಕರು ಬೆಳೆ ಹಾನಿಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಇನ್ನೇರಡು ದಿನಗಳಲ್ಲಿ ಬೆಳೆ ಹಾನಿಯ ಸಮಗ್ರ ಮಾಹಿತಿ ದೊರಯಲಿದೆ ಎಂದರು.
ಕಳೆದ ಕೆಲ ದಿನಗಳ ಹಿಂದೆ ಸುರಿದ ಬಾರೀ ಮಳೆಯಿಂದಾಗಿ ಸುಮಾರು 25 ಸಾವಿರ ಎಕರೆ ಬೆಳೆ ಹಾನಿಯಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದರು, ಇದೀಗ ಗಾಯದ ಮೇಲೆ ಬರೆ ಎಳೆಯುವಂತೆ ಮತ್ತೆಯಾಗಿದ್ದು, ಮಳೆಯಿಂದಾಗಿ ಅವಳಿ ತಾಲೂಕಿನಲ್ಲಿ ಸಾಕಷ್ಟ ಬೆಳೆ ಹಾನಿಯಾಗಿದ್ದು ಮತ್ತೆ ರೈತರನ್ನು ಸಂಕಷ್ಟಕ್ಕೆ ದೂಡಿದೇ ಎಂದರು.
ಅತಿಯಾದ ಮಳೆಯಿಂದಾಗಿ ಮಠದ ಕೆರೆ ಮೈದುಂಬಿ ಹರಿಯುತ್ತಿದ್ದು ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೇ ಅಲ್ಲದೇ ಕೆರೆಯಲ್ಲಿ ಬಿಟ್ಟಿದ್ದ ಮೀನುಗಳು ಕೂಡ ಸಾವನ್ನಪ್ಪಿದ್ದು ಸಾಕಷ್ಟು ಹಾನಿಯಾಗಿದೆ ಅವರಿಗೂ ಕೂಡ ಪರಿಹಾರ ಕೊಡಿಸುವುದಾಗಿ ಹೇಳಿದರು.
ಕಳೆದ ರಾತ್ರಿ ಸುರಿದ ಅತಿಯಾದ ಮಳೆಯಿಂದಾಗಿ ಹೊನ್ನಾಳಿಯಿಂದ ತುಮ್ಮಿನಕಟ್ಟೆ ಸಂಪರ್ಕಿಸುವ ರಸ್ತೆ ಹನುಮಸಾಗರ ತಾಂಡದ ಬಳಿ ಕೊಚ್ಚಿಹೋಗಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕವೇ ಕಡಿತಗೊಂಡಿದ್ದು, ವಿದ್ಯುತ್ ಕಂಬಗಳು ಧರೆಶಾಯಿಯಾಗಿದ್ದು ಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ರಸ್ತೆ ದುರಸ್ಥಿಯ ಮಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಬಲಮುರಿ ಗ್ರಾಮದ ಮಾರಿಹಳ್ಳ ಮೈದುಂಬಿ ಹರಿಯುತ್ತಿದ್ದು ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ ಶಾಸಕರು, ದೊಡ್ಡೇರಹಳ್ಳಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆ ಕೊಚ್ಚಿ ಹೋಗಿದೆ ಅಲ್ಲದೇ,ಸರ್ಕಾರ ಕಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದು ಶಾಲೆಯಲ್ಲಿದ್ದ ಧವಸ ದಾನ್ಯಗಳು ನೀರು ಪಾಲಾಗಿದ್ದು, ಶಾಲೆಯ ಕಾಂಪೌಂಡ್ ಗೋಡೆ ಕುಸಿದಿದ್ದು ಗ್ರಾಮದ ಕಾಳಮ್ಮ ದೇವಾಲಯದಲ್ಲಿ ಕಳಜಿ ಕೇಂದ್ರ ತೆರಯುವಂತೆ ಸೂಚನೆ ನೀಡಲಾಗಿದೆ ಎಂದರು.
ಮಾದೇನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಸಾಕಷ್ಟು ಸಮಸ್ಯೆಯಾಗಿದ್ದು ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳು ಮಳೆಯಾನಿಯ ಬಗ್ಗೆ ಸೂಕ್ತ ವರದಿ ನೀಡುವಂತೆ ಸೂಚನೆ ನೀಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಸಾಕಷ್ಟು ರಸ್ತೆ, ಸೇತುವೆಗಳಿಗೂ ಹಾನಿಯಾಗಿದ್ದು ಈ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುವಂತೆ ಹೇಳಿದ್ದು, ಸರ್ಕಾರದಿಂದ ಹಾನಿಯಾದವರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಹೇಳಿದರು.
ಬೆಳಗ್ಗೆ ಏಳು ಘಂಟೆಯಿಂದ ಉಪಹಾರ ಸೇವಿಸದೇ ತೊಂಕಕಟ್ಟಿಕೊಂಡು ಅವಳಿ ತಾಲೂಕಿನಾಧ್ಯಂತ ಮದ್ಯಾಹ್ನ ಮೂರುವರೆ ಘಂಟೆಯವರೆಗೆ ಓಡಾಟ ನಡೆಸಿದ ಶಾಸಕರು ಮಳೆ ಹಾನಿಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದರು.