ನ್ಯಾಮತಿ : ಕಳೆದ ಸೋಮವಾರ ಸುರಿದ ಧಾರಾಕಾರ ಮಳೆಗೆ ಅವಳಿ ತಾಲೂಕಿನಲ್ಲಿ ಭಿತ್ತನೆ ಮಾಡಿದ ಬೆಳೆಗಳಲ್ಲಿ ಶೇ.75 ರಷ್ಟು ಬೆಳೆ ಹಾನಿಯಾಗಿದ್ದು ಅಧಿಕಾರಿಗಳು ಮಳೆ ಹಾನಿಯ ಬಗ್ಗೆ ಸಮಗ್ರ ಅವದಿ ತಯಾರಿಸುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಜೀನಹಳ್ಳಿ, ಆರುಂಡಿ,ಕೆಂಚಿಕೊಪ್ಪ,ಮಲ್ಲಿಗೆನಹಳ್ಳಿ,ಬೆಳಗುತ್ತಿ,ಮಾದಾಪುರ,ಕೊಡತಾಳ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆ ಹಾಗೂ ಮನೆ ಹಾನಿಗಳನ್ನು ಪರಿಶೀಲನೆ ನಡೆಸಿ, ಗ್ರಾಮಸ್ಥರ ಅಹವಾಲು ಆಲಿಸಿ ಅವರು ಮಾತನಾಡಿದರು.
ಕಳೆದ ಕೆಲ ದಿನಗಳ ಹಿಂದೆ ಸುರಿದ ಬಾರೀ ಮಳೆಯಿಂದಾಗಿ ಬೆಳೆ ಕಳೆದುಕೊಂಡು ಕಂಗಾಲಾಗಿದ್ದು ರೈತರಿಗೆ, ಕಳೆದ ಸೋಮವಾರ ಸುರಿದ ಬಾರೀ ಮಳೆ ಗಾಯಯ ಮೇಲೆ ಬರೆ ಎಳೆದಂತಾಗಿದ್ದು, ಅಧಿಕಾರಿಗಳು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಸಮಗ್ರ ವರದಿ ನೀಡುವಂತೆ ಎಚ್ಚರಿಕೆ ನೀಡಿದರು.
ಶನಿವಾರ ನಡೆಯ ಬೇಕಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ರದ್ದು ಮಾಡಿದ್ದು, ಅಧಿಕಾರಿಗಳು ಈ ಒಂದು ವಾರವನ್ನು ಚಾಲೆಂಜ್ ಎಂದು ಸ್ವೀಕರಿಸಿ ಎಲ್ಲಾ ಅಧಿಕಾರಿಗಳು ಜಂಟಿ ಸರ್ವೇ ಮಾಡುವಂತೆ ತಿಳಿಸಿದರು.
ರೈತರು ಸಂಕಷ್ಟದಲ್ಲಿರು ಸಂದರ್ಭದಲ್ಲಿ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ ಇರ ಬೇಕು, ಆದರೇ ಕೆಲ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ ಇರದೇ ದಾವಣಗೆರೆಯಿಂದ ಓಡಾಡುತ್ತಿರುವುದು ನನ್ನ ಗಮನಕ್ಕೆ ಇದ್ದು, ಇದನ್ನು ನಾನು ಸಹಿಸುವುದಿಲ್ಲಾ ಎಂದರು.
ಅವಳಿ ತಾಲೂಕಿನಾಧ್ಯಂತ 225 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಗೃಹಪಯೋಗಿ ವಸ್ತುಗಳು ಹಾನಿಯಾಗಿದ್ದರೇ, 70 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು ಇವುಗಳಿಗೆ ಹಾನಿಯ ಆದಾರದ ಮೇಲೆ ಎಬಿಸಿ ಕ್ಯಾಟಗರಿ ಆದಾರದ ಮೇಲೆ ಪರಿಹಾರ ನೀಡುವುದಾಗಿ ತಿಳಿಸಿದರು.
ಅವಳಿ ತಾಲೂಕಿನಾಧ್ಯಂತ ರಸ್ತೆ, ಸೇತುವೆ ಸೇರಿದಂತೆ ಸಾಕಷ್ಟು ಹಾನಿಯಾಗಿದ್ದು ಈ ಬಗ್ಗೆ ಅಧಿಕಾರಿಗಳು ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ ಶಾಸಕರು, ಅಧಿಕಾರಿಗಳು ಬೇಜಬ್ದಾರಿ ತೋರದೇ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವ ಕೆಲಸ ಮಾಡ ಬೇಕೆಂದರು.
ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ ಮಾತನಾಡಿ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳು ವರದಿಯನ್ನು ತಯಾರಿಸುತ್ತಿದ್ದಂತ ಅದನ್ನು ಸರ್ಕಾರಕ್ಕೆ ನೀಡಲಾಗುವುದು ಎಂದರು.
ತಹಶೀಲ್ದಾರ್ ಎಂ.ರೇಣುಕಾ, ಜಿಲ್ಲಾಜಂಟಿ ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಸಹಾಯಕ ಅಭಿಯಂತರ ತ್ಯಾಗರಾಜ್, ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಇಓ ರಾಮಬೋವಿ, ಪಿಡಬ್ಲ್ಯೂಡಿ ಎಇಇ ಗಂಗಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.