ನ್ಯಾಮತಿ ಅಗಸ್ಟ 5 ಪಟ್ಟಣದಲ್ಲಿರುವ ಮಾಲ್ತೇಶ್ ಕಲ್ಯಾಣ ಮಂಟಪದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ (ರಿ) ನ್ಯಾಮತಿ ತಾಲೂಕು ವತಿಯಿಂದ ಡಾ. ಬಿಆರ್ ಅಂಬೇಡ್ಕರ್ 131ನೇ ಜನ್ಮ ದಿನೋತ್ಸವ ಹಾಗೂ ಪ್ರೊ ಬಿ ಕೃಷ್ಣಪ್ಪನವರ 85ನೇ ಜನ್ಮದಿನದ ಅಂಗವಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ಪಿಎಸ್ಐ ರಮೇಶ್ ಮತ್ತು ಮುರುಡೇಶ್ವರ ನೆರವೇರಿಸಿದರು.
ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರವರು ಬಿ ಆರ್ ಅಂಬೇಡ್ಕರ್ ಹಾಗೂ ಪ್ರೊಫೆಸರ್ ಬಿ ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದವರು ಇಂಥ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷವಾಗಿದೆ. ಎಸ್ ಸಿ ಎಸ್ ಟಿ ಸಮುದಾಯದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಅತಿ ಹೆಚ್ಚು ಅಂಕ ಪಡೆದ ಅವರನ್ನು ಗುರುತಿಸಿ ಸನ್ಮಾನಿಸಿರುವುದು ಸ್ಲಾಗನೀಯ. ಆ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನೂ ಅತಿ ಹೆಚ್ಚು ಅಂಕ ಪಡೆಯಲಿಕ್ಕೆ ಉಮ್ಮಸ್ಸು ಕೊಟ್ಟಂತಾಗಿದೆ ಎಂದು ತಿಳಿಸಿದರು.
ಎ ಸಿ ಹುಲ್ಲಮನಿ ತಿಮ್ಮಣ್ಣ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸಮಾಜದಲ್ಲಿ ಗುರುತಿಸುವಂತೆ ಆಗಿದೆ ಎಂದರೆ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ರವರು ಸಂವಿಧಾನವನ್ನು ತಂದು ಕೊಟ್ಟಿರುವುದರಿಂದ ನಮಗೆ ಈ ಮಟ್ಟಕ್ಕೆ ಬರಲಿಕ್ಕೆ ಸಾಧ್ಯ ವಾಯಿತು ಎಂದರು.
ಪಿಎಸ್ಐ ರಮೇಶ್ ಮತ್ತು ಅಬಕಾರಿ ಮುರುಡೇಶ್ವರ ತಾಲೂಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ರಂಗಪ್ಪನವರು ಮಾತನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಅತಿ ಹೆಚ್ಚು ಅಂಕ ಪಡೆದಿರುವುದರಿಂದ ಇವತ್ತು ನಿಮ್ಮಗಳಿಗೆ ಸನ್ಮಾನಿಸುವ ಭಾಗ್ಯ ನಮ್ಮದಾಗಿದೆ ಎಂದರು.
ಉಪನ್ಯಾಸಕ ಎಂ ಸಿ ಮೋಹನ್ ರವರು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸ ಜೀವನ ಯಾವ ರೀತಿ ಶಿಕ್ಷಣ ಪಡೆದರೆ ನಾವು ಸಮಾಜದಲ್ಲಿ ಶಿಕ್ಷಣವಂತರಾಗಿ ಅಧಿಕಾರವನ್ನು ಪಡೆದು ಯಾವ ರೀತಿ ಸಮಾಜ ಸೇವೆಯನ್ನು ಮಾಡಬೇಕು ಎಂದು ಸವಿಸ್ತಾರವಾಗಿ ಒಂದು ಗಂಟೆಗಳ ಕಾಲ ಉಪನ್ಯಾಸವನ್ನು ನೀಡಿದರು.
ವೇದಿಕೆ ಮೇಲಿರುವ ಗಣ್ಯಾತಿಗಣ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಗೃಹರಕ್ಷಕ ದಳದ ರಾಘವೇಂದ್ರರವರಿಗೆ ಮುಖ್ಯಮಂತ್ರಿಯ ಪದಕ ಪಡೆದಿರುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಉಪ ವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ಪಿಎಸ್ಐ ರಮೇಶ್ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಂಗಪ್ಪ ಗೃಹರಕ್ಷಕ ದಳದ ರಾಘವೇಂದ್ರ ಉಪನ್ಯಾಸಕ ಎಂಸಿ ಮೋಹನ್. ದಲಿತ ಸಂಘರ್ಷ ಸಮಿತಿಯ ಉಪಾಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರುಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಪೋಷಕರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.