ಹೊನ್ನಾಳಿ ಆ 6 ಪುರಸಭೆ ಸಭಾಂಗಣದಲ್ಲಿ ಇಂದು ಪಟ್ಟಣದಲ್ಲಿ ಬರುವ ಪುರಸಭೆಗೆ ವ್ಯಾಪ್ತಿಗೆ ಸೇರಿರುವ 33 ಹಳೆಯ ಮಳಿಗೆ 6 ಹೊಸ ಮಳಿಗೆಗಳ ಅವಧಿ ಮುಕ್ತಾಯ ಗೊಂಡಿರುವ ಕಾರಣ ಪುರಸಭೆಯ ಅಧ್ಯಕ್ಷ ಟಿ ಹೆಚ್ ರಂಗನಾಥ್ ಉಪಾಧ್ಯಕ್ಷ ರಂಜಿತ ವಡ್ಡಿ ಚೆನ್ನಪ್ಪ ನೇತೃತ್ವದಲ್ಲಿ ತುರ್ತುಸಭೆಯನ್ನು ಕರೆಯಲಾಯಿತು.
ಪುರಸಭೆಯ ಮುಖ್ಯ ಅಧಿಕಾರಿ ಕಾರ್ಯನಿಮಿತ್ತ ಬೇರೆ ಕಡೆ ತೆರಳಿ ಇರುವುದರಿಂದ ಕಂದಾಯ ಅಧಿಕಾರಿ ವಸಂತ್ ಮತ್ತು ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳ ಜೊತೆ ಚರ್ಚೆಯನ್ನು ಮಾಡಿ ಈ ತಿಂಗಳ ಅಂತ್ಯದ ಒಳಗೆ ಹರಾಜು ಪ್ರಕ್ರಿಯೆಯನ್ನು ನಡೆಸಲು ಪುರಸಭೆಯ ಅಧ್ಯಕ್ಷರಿಗೆ ಮತ್ತು ಮುಖ್ಯ ಅಧಿಕಾರಿಗೆ ಜವಾಬ್ದಾರಿಯನ್ನು ಸರ್ವ ಸದಸ್ಯರು ಒಪ್ಪಿಗೆ ಮೇರೆಗೆ ಕೊಡಲಾಯಿತು.
2022- 23ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿಗದಿಗೊಂಡಿರುವ ಅನುದಾನಕ್ಕೆ ಕ್ರಿಯಾ ಯೋಜನೆಯ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಂಗಪ್ಪ ಟಿ ಹೆಚ್. ಉಪಾಧ್ಯಕ್ಷರಾದ ರಂಜಿತ ವಡ್ಡಿ ಚೆನ್ನಪ್ಪ. ಸದಸ್ಯರುಗಳಾದ ಬಾವಿಮನಿ ರಾಜಣ್ಣ .ಓಬಳದಾರ್ ಬಾಬು. ಸವಿತಾ ಮಹೇಶ್. ಸಾವಿತ್ರಮ್ಮ ವಿಜೇಂದ್ರಪ್ಪ. ಸುರೇಶ್ ಎಂ. ರಾಜೇಂದ್ರ. ಮೇಲಪ್ಪ. ಧರ್ಮಪ್ಪ. ಸುಮಾ ಮಂಜುನಾಥ್. ತನ್ವೀರ್. ಹಾಗೂ ಪುರಸಭೆ ಅಧಿಕಾರಿಗಳಾದ ಕಂದಾಯ ಅಧಿಕಾರಿ ವಸಂತ್. ಭಾಗಮ್ಮ .ಪರಮೇಶ್ ನಾಯಕ್ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *