ದಾವಣಗೆರೆ:ದಾವಣಗೆರೆ ತಾಲ್ಲೂಕಿನ ಪ್ರಮುಖ ಕೆರೆಗಳಲ್ಲಿ
ಒಂದಾಗಿರುವ ಹದಡಿ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು,
ಇಂದು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು
ವಿಕ್ಷಿಸಿದರು.
ಇಂದು ಮದ್ಯಾಹ್ಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ
ಭೇಟಿ ನೀಡಿದ ಶಾಸಕರು ಕಳೆದ 6 ತಿಂಗಳ ಹಿಂದೆ ಕೆರೆ ಏರಿಯಲ್ಲಿ
ಬಿರುಕು ಕಾಣಿಸಿಕೊಂಡ ವೇಳೆ ತಾತ್ಕಾಲಿಕವಾಗಿ ದುರಸ್ಥಿ
ಪಡಿಸಲಾಗಿತ್ತು. ಆದರೆ ಹೆಚ್ಚಿನ ಮಳೆ ಆಗಿ ಕೆರೆಯಲ್ಲಿ ನೀರು
ಶೇಖರಣೆ ಹೆಚ್ಚುವರಿಯಾಗಿರುವುದರಿಂದ ಇದೀಗ ಮತ್ತೆ ಕೆರೆ
ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದರು.
ಈಗಾಗಲೇ ಕೆರೆ ಏರಿ ದುರಸ್ಥಿಗಾಗಿ ನೀರಾವರಿ ಇಲಾಖೆಯಿಂದ 1.70
ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ
ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಲಾಗಿದೆ ಎಂದ ಅವರು
ಅಲ್ಲಿಯವರೆಗೆ ಕೆರೆ ಏರಿ ಮೇಲೆ ಬಾರಿ ವಾಹನಗಳನ್ನು
ನಿಷೇಧಿಸುವಂತೆಯೂ ಅಧಿಕಾರಿಗಳೀಗೆ ತಿಳಿಸಿದರು.
ಕೆರೆ ಏರಿಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ
ಪಡಿಸಲು ನೀರಾವರಿ ಮತ್ತು ಲೊಕೋಪಯೋಗಿ ಇಲಾಖೆಗಳ
ಸಹಯೋಗದಡಿ ಕ್ರಿಯಾ ಯೋಜನೆ ತಯಾರಿಸುವಂತೆ ತಿಳಿಸಿದ
ಅವರು ಸರ್ಕಾರದಿಂದ ಈ ಕ್ರಿಯಾಯೋಜನೆಗೆ ಅಗತ್ಯ ಅನುದಾನ
ಬಿಡುಗಡೆ ಮಾಡಿಸಲಾಗುವುದು ಎಂದರು.
ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ
ಮಂಜುನಾಥ್,ಲೊಕೋಪಯೋಗಿ ಇಲಾಖೆಯ ಕಾರ್ಯಪಾಲಕ
ಅಭಿಯಂತರ ವಿಜಯ್ ಕುಮಾರ್, ಸಹಾಯಕ ಕಾರ್ಯಪಾಲಕ
ಅಭಿಯಂತರರಾದ ನರೇಂದ್ರಬಾಬು, ಸಹಾಯಕ ಅಭಿಯಂತರ
ವೀರಪ್ಪ, ಮುಖಂಡರುಗಳಾದ ಕುಕ್ಕವಾಡ ಮಲ್ಲೇಶಪ್ಪ,
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎನ್.ಮಂಜುನಾಥ್, ಮಾಜಿ
ಸದಸ್ಯ ಆರನೇಕಲ್ಲು ಮಂಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಿಸಲೇರಿ ಈರಣ್ಣ,
ಶಿರಮಗೊಂಡನಹಳ್ಳಿ ರುದ್ರೇಶ್, ಹದಡಿಯ ಮಹಾಂತೇಶ್,
ಎಂ.ಡಿ.ನಿಂಗಪ್ಪ, ಕುಕ್ಕವಾಡ ಅಂಜಿನಪ್ಪ ಮತ್ತಿತರರಿದ್ದರು.