ಸಾಸ್ವೇಹಳ್ಳಿ: ಶ್ರಾವಣ ಮಾಸದ ಎರಡನೇ ಮಂಗಳವಾರದಂದು ಶ್ರೀ ಮಂಗಳ ಗೌರಿ
ವ್ರತವನ್ನು ಸಾಸ್ವೇಹಳ್ಳಿ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಅಚರಣೆ ಮಾಡಿದರು.
ಸಾಮಾನ್ಯವಾಗಿ ಶ್ರಾವಣಮಾಸ ಬಂತು ಎಂದರೆ ಪ್ರತಿ ವಾರ ಪೂರ್ತಿ ಪೂಜಾವ್ರತಗಳಲ್ಲಿ
ನಿರತರಾಗಿರುವ ಸುಮಂಗಲಿಯರು ಒಬ್ಬೊಬರೂ ಒಂದೊಂದು ದಿವಸ ಇಷ್ಟಾರ್ಥಸಿದ್ದಿಗೆ
ವಿವಿಧ ದೇವತೆಗಳ ಪೂಜಾಕಾರ್ಯಗಳಲ್ಲಿ ವಿವಿಧ ವ್ರತಗಳನ್ನು ಕೈಗೊಳ್ಳುವ
ಹೆಣ್ಣುಮಕ್ಕಳು ದೇವರನ್ನು ಪೂಜಿಸುತ್ತಾರೆ ಹಾಗಾಗಿ ಶ್ರಾವಣ ಮಾಸ ಧಾರ್ಮಿಕ
ವೈಶಿಷ್ಟ್ಯತೆಗೆ ಪಾತ್ರವಾಗಿದೆ ಎಂದು ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ
ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರಾವಣಮಾಸದಲ್ಲಿ ಮನೆಗಳಲ್ಲಿ ಪೂಜೆ, ಪುನಸ್ಕಾರಗಳನ್ನು ಆಚರಿಸುವ
ಮಹಿಳೆಯರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿ ಪೂಜೆಯನ್ನು
ಮಾಡಿ, ಗ್ರಾಮೀಣ ಅಕ್ಕಪಕ್ಕದ ಮನೆಗಳ ಮುತ್ತೈದೆಯರನ್ನು ಕರೆದು ಎಲೆ,ಅಡಿಕೆ,
ಬಾಳೆಹಣ್ಣು, ತಂಬಿಟ್ಟು ಉಡಿ ತುಂಬುವುದು ಸಂಪ್ರದಾಯ ಪೂರ್ವಜರ ಕಾಲದಿಂದಲೂ
ನಡೆದುಕೊಂಡು ಬಂದಿದ್ದು ಗೃಹಗಳಲ್ಲಿ ಇಷ್ಟಾರ್ಥ ಸಿದ್ದಿ ಮತ್ತು ಸಂಕಷ್ಟ
ನಿವಾರಾಣಾರ್ಥವಾಗಿ ಮುತ್ತೈದೆ ಹೆಣ್ಣುಮಕ್ಕಳು ಮಂಗಳಗೌರಿ, ಶುಕ್ರಗೌರಿ ವ್ರತದಲ್ಲಿ
ಗೌರಿಯನ್ನು ಪೂಜಿಸುತ್ತಾರೆ ಎಂದರು.
ಮನೆ ಮತ್ತು ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ದೇವರ ಕೋಣೆಯನ್ನು
ಅಲಂಕರಿಸಲಾಗುವುದು. ದೇವರ ಕೋಣೆಯನ್ನು ರಂಗೋಲಿ, ದೀಪ ಹೂವುಗಳಿಂದ
ಅಲಂಕರಿಸಿ, ಗೌರಿ ಮೂರ್ತಿಗೆ ದೇವರು ಮನೆಗಳಲ್ಲಿ ಕಲಶವನ್ನು ಸ್ಥಾಪಿಸಿ ಸೀರೆಯುಡಿಸಿ
ಫಲ-ಪುಷ್ಪಗಳಿಂದ ಮಂಗಲಗೌರಿ ವ್ರತದ ಪುಸ್ತಕವನ್ನು ಪಾರಾಯಣ ಮಾಡಿ ಪೂಜಾ
ಕಾರ್ಯವನ್ನು ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಗುತ್ತದೆ ಎನ್ನುತ್ತಾg
ಕುಳಗಟ್ಟೆ ಗ್ರಾಮದ ಶಕುಂತಲಮ್ಮಮುರಿಗೇಶ್ಯ್ಯ.
ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು, ಮದುವೆಯಾಗಿ ಐದು ವರ್ಷ ಆಗಿರುವ
ಮುತ್ತೈದೆಯರು ಸೇರಿ ಪೂಜೆ ಮಾಡಿ ಮಂಗಳಗೌರಿ ಪೂಜಿಸಲು ಬಂದ ನೆರೆ-
ಹೊರೆಯಯ ಮುತ್ತೈದೆಯರು ಮನೆಯಲ್ಲಿಯೇ ಆಚರಣೆ ಮಾಡುವ
ಮೂಲಕ ಬಾಗಿನ ನೀಡಲಾಗುತ್ತದೆ ಎಂದು ಬಸಮ್ಮನಂಜುಂಡಯ್ಯ ತಿಳಿಸಿದರು.
ಚಿತ್ರ1 ಸಾಸ್ವೇಹಳ್ಳಿ ಹೋಬಳಿ ವ್ಯಾಪ್ತಿಯ ಕುಳಗಟ್ಟೆ ಗ್ರಾಮದ ಮುರಿಗೇಶ್ಯ್ಯ
ಮನೆಯಲ್ಲಿ ಶ್ರಾವಣಮಾಸದ ಎರಡÀನೇ ಮಂಗಳವಾರ ಮಂಗಳಗೌರಿ ಪೂಜೆ
ನೆರವೇರಿಸಿ ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿಯವರ
ಸಮ್ಮುಖದಲ್ಲಿ ಬಾಗಿನ ನೀಡುತ್ತೀರುವುದು.