ಆಗಸ್ಟ್ ತಿಂಗಳ 13, 14 ಮತ್ತು 15ನೇ ದಿನಾಂಕ ದಂದು ಭಾರತ ದೇಶ ಸ್ವತಂತ್ರ ಪಡೆದು 75 ವರ್ಷಗಳು ತುಂಬುತ್ತಿರುವ ಈ ಶುಭ ಸಂದರ್ಭದಲ್ಲಿ ದೇಶದ ಅಮೃತ ಮಹೋತ್ಸವದ ಸಂಕೇತವಾಗಿ ದಿನಾಂಕ: 13ರ ಬೆಳಿಗ್ಗೆ 6:00 ಗಂಟೆ ಯಿಂದ ದಿನಾಂಕ 15 ರ ಸಂಜೆ 6:00 ಗಂಟೆ ವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸುವಂತಹ ಅವಕಾಶವನ್ನು ಪ್ರತಿಯೊಬ್ಬರಿಗೂ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಪಿಸಿಕೊಟ್ಟವೆ.ಇದು ದೇಶ ಅಭಿಮಾನದ ಪ್ರಶ್ನೆ ಅಷ್ಟೇ ಅಲ್ಲ,ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ – ಬಲಿದಾನ ಮಾಡಿದವರನ್ನು ಸ್ಮರಿಸುವಂತಹ ಕೆಲಸವನ್ನು ಪ್ರತಿಯೊಬ್ಬ ಭಾರತೀಯ ನು ಮಾಡಬೇಕಾಗಿದೆ. ಇದಕ್ಕಾಗಿ ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ದಿನಾಂಕ 10.08.2022ರ ಬುಧವಾರ ಸಾಯಂಕಾಲ 5:00 ಗಂಟೆ ಯಿಂದ ಆಸಕ್ತರು ರಾಷ್ಟ್ರಧ್ವಜವನ್ನು ದರ 22-00 ರೂಪಾಯಿ ಗಳನ್ನು ಸಂದಾಯ ಮಾಡಿ ಪಡೆಯಬಹುದೆಂದು ಪತ್ರಿಕಾ ಪ್ರಕಟಣೆಯ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನಂತಿಸಿದೆ.ದೇಶ ಅಭಿಮಾನದ ಧ್ವಜ ಆರೋಹಣ ಅಭಿಯಾನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ, ಬಿ. ವಾಮದೇವಪ್ಪ,ಅವರು ಅಭಿಮಾನ ಪೂರ್ವಕವಾಗಿ ಜಿಲ್ಲೆಯ ಸಮಸ್ತ ದೇಶಾಭಿಮಾನಿಗಳಲ್ಲಿ ವಿನಂತಿಸಿ ಕೊಂಡಿದ್ದಾರೆ.
ಬಿ.ವಾಮದೇವಪ್ಪ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ.

Leave a Reply

Your email address will not be published. Required fields are marked *