ಹೊನ್ನಾಳಿ : ಕಳೆದ ಕೆಲ ದಿನಗಳಿಂದ ಸುರಿದ ಬಾರೀ ಮಳೆಯಿಂದಾಗಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 30 ಸಾವಿರ ಎಕರೆಗೂ ಹೆಚ್ಚು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ವಿವಿಧ ಮನೆ ಪೀಡಿತ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 350ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮನೆ ಹಾನಿಯಾದವರಿಗೆ ಎ,ಬಿ.ಸಿ ಕೆಟಗರಿಗನುಗುಣವಾಗಿ ಹರಿಹಾರ ನೀಡಲಾಗುವುದು ಎಂದರು.
ಇದರ ಜೊತೆಗೆ ಅವಳಿ ತಾಲೂಕಿನಲ್ಲಿ 380 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿನ ಧವಸಧಾನ್ಯಗಳು ಹಾನಿಯಾಗಿದ್ದು ಅವರಿಗೆ ತಲಾ ಹತ್ತು ಸಾವಿರ ಪರಿಹಾರ ನೀಡಲಾಗಿದೆ ಎಂದರು.
ಇನ್ನು ತುಂಗಭದ್ರಾನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಈಗಾಗಲೇ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು ಅಲ್ಲಿ 18 ಕುಟುಂಬಗಳ 85 ಜನರು ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಅವಳಿ ತಾಲೂಕಿನಲ್ಲಿ ಸುರಿದ ಬಾರೀ ಮಳೆ ರೈತರ ಪಾಲಿಗೆ ಶಾಪವಾಗಿದ್ದು ರೈತರು ಬೆಳೆದ ಬೆಳೆಗಳೆಲ್ಲಾ ಮಣ್ಣುಪಾಲಾಗುವಂತೆ ಮಾಡಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ತಿಳಿಸಿದರು.
ಮಳೆಹಾನಿ ಪೀಡೀತ ಗ್ರಾಮಳಿಗೆ ಭೇಟಿ : ತಾಲೂಕಿನ ಬೇಲಿಮಲ್ಲೂರು, ಕೋಟೆಮಲ್ಲೂರು, ಚಿಕ್ಕಗೋಣಿಗೆರೆ, ಹೊನ್ನೂರುವಡ್ಡರಹಟ್ಟಿ, ಹೊನ್ನೂರು ವಡ್ಡರಹಟ್ಟಿತಾಂಡ,ಅರಕರೆ, ಮಾಸಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು, ಮಳೆಹಾನಿ,ಮನೆಹಾನಿ ಪರಿಶೀಲನೆ ನಡೆಸಿದರಲ್ಲದೇ, ಸಂಕಷ್ಟಕ್ಕೀಡಾದವರ ಅಳಲಿ ಆಲಸಿ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಬರವಸೆ ನೀಡಿದರು.
ಈ ಸಂದರ್ಭ ತಶೀಲ್ದಾರ ರಶ್ಮಿ, ಇಓ ರಾಮಬೋವಿ, ತೋಟಗಾರಿಕೆ ಇಲಾಖೆ ಅಧಿಕಾರಿ ವೀರಭದ್ರಪ್ಪ, ಕೃಷಿ ಅಧಿಕಾರಿ ಪ್ರತಿಮಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.