ಸತ್ಯ, ಶುದ್ಧ, ಕಾಯಕದ ಸಂದೇಶ ಸಾರಿದ ಶರಣ ಶ್ರೀ ನುಲಿಯ ಚಂದಯ್ಯ ರವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಶ್ಲಾಘನೀಯ ವಿಷಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ನುಲಿಯ ಚಂದಯ್ಯ ರವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಕಾಯಕ ವರ್ಗಗಳಿಗೆ ಬಹಳಷ್ಟು ಮಹತ್ವ ನೀಡಿ, ಶರಣ ಶ್ರೀ ಕುಳುವ ನುಲಿಯ ಚಂದಯ್ಯ ನವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತದೆ. ನುಲಿಯ ಚಂದಯ್ಯನವರು ಸತ್ಯ, ಶುದ್ಧ, ಕಾಯಕದ ಸಂದೇಶವನ್ನು ನಮಗೆಲ್ಲರಿಗೂ ನೀಡಿದ್ದಾರೆ, ನಾವೆಲ್ಲರೂ ಶರಣರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ಸಾಗಬೇಕು ಎಂದರು.
ಎ.ವಿ.ಕೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಗೀತಾ ಬಸವರಾಜ್ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಶ್ರೀ ನುಲಿಯ ಚಂದಯ್ಯ ರವರು ವಿಶೇಷವಾಗಿ ಕಾಯಕ ತತ್ವವನ್ನು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು. ಶರಣರು ಸತ್ಯ, ಶುದ್ಧ ಕಾಯಕದಿಂದ ಬಂದ ಹಣದಿಂದ ದಾಸೋಹಗಳನ್ನು ಏರ್ಪಡಿಸುತ್ತಿದ್ದರು. ಅವರು ಸುಮಾರು 48 ವಚನಗಳ ರಚಿಸಿ ಸತ್ಯ, ಶುದ್ಧ, ಪ್ರಾಮಾಣಿಕ ಸಂದೇಶವನ್ನು ಜನರಿಗೆ ತಿಳಿಸಿದ್ದಾರೆ. ಶ್ರಮಜೀವಿಗಳು ಮಾಡುವ ಕಾಯಕಕ್ಕೆ ಸೂಕ್ತ ಗೌರವ ಸಿಗಬೇಕು ಎಂಬುದು ಅವರ ಮನದಾಳದ ಆಶಯವಾಗಿತ್ತು ಎಂದರು.
ಸಮಾಜದ ಮುಖಂಡ ಹಾಗೂ ವಕೀಲರಾದ ಕುಮಾರ್ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಜಿಲ್ಲಾಡಳಿತದಿಂದ ಸಾಂಕೇತಿಕವಾಗಿ ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮ ಸಮಜದ ಸೌಭಾಗ್ಯ ಎಂದರು.
ಈ ವೇಳೆ ಸಮಾಜದ ಮುಖಂಡರಾದ ಆನಂದಪ್ಪ, ವಿರುಪಾಕ್ಷಪ್ಪ, ಓಂಕಾರಪ್ಪ ಕಾಯಕ ನುಲಿಯ ಚಂದಯ್ಯನವರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಚಂದ್ರ, ಹಾಗೂ ಸಮಾಜದ ಮುಖಂಡರುಗಳಾದ ಮಂಜುನಾಥ್, ಮಾರಪ್ಪ, ಗಂಗರಾಜು, ಶ್ರೀನಿವಾಸ್, ನಾಗರಾಜ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *