ನ್ಯಾಮತಿ ಪಟ್ಟಣದಲ್ಲಿರುವ ತಾಲೂಕ ಆಫೀಸ್ ಅವರಣದಲ್ಲಿ ತಾಲೂಕ್ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶ್ರೀ ಶಿವಶರಣ ಕಾಯಕಯೋಗಿ ನುಲಿಯ ಚಂದಯ್ಯ 915ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯರವರು ಶ್ರೀ ಶಿವಶರಣ ನುಲಿಯ ಚಂದಯ್ಯ ನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು ಕೊರಚ ಸಮುದಾಯದವರಿಗೆ ಶುಭಾಶಯಗಳನ್ನು ಕೋರಿ, ಸಮಾಜದವರು ನುಲಿಯ ಚಂದಯ್ಯನವರ ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದುಕೊಂಡು ಹೋಗಬೇಕು ಎಂದು ಸಮಾಜದ ಬಾಂದವರಿಗೆ ತಿಳಿಸಿದರು.
ಉಪಸ್ಥಿತಿಯಲ್ಲಿ ತಾಲೂಕ್ ಶಾಸಕರಾದ ಎಂಪಿ ರೇಣುಕಾಚಾರ್ಯ, ತಹಶೀಲ್ದಾರ್ ಶ್ರೀಮತಿ ರೇಣುಕಮ್ಮ, ಸಮಾಜದ ಅಧ್ಯಕ್ಷರಾದ ಜ್ಯೋತಿ ಕುಮಾರ್, ಉಪಾಧ್ಯಕ್ಷರಾದ ಸುಭಾಷ್, ಗೌರವಾಧ್ಯಕ್ಷ ನಂಜುಂಡಪ್ಪ, ಕಾರ್ಯದರ್ಶಿ ಗಂಗಾಧರ ,ಸುರೇಶ್ ಇನ್ನು ಮುಂತಾದ ಸಮಾಜ ಮುಖಂಡರು ಸಹ ಭಾಗಿಯಾಗಿದ್ದರು.