ಹೊನ್ನಾಳಿ ಃ ತುಂಬಿದ ಕೆರೆ ಕಟ್ಟೆಗಳಿಗೆ, ಹಳ್ಳಕೊಳ್ಳಗಳಿಗೆ, ತುಂಬಿ
ಹರಿಯುವ ನದಿಗಳಿಗೆ ಕತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ
ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ ಎಂದು ಮಾಜಿ ಶಾಸಕ
ಡಿ.ಜಿ.ಶಾಂತನಗೌಡ ಹೇಳಿದರು.
ಅವರು ಹೊನ್ನಾಳಿ ತಾಲೂಕಿನ ಎಂ.ಹನುಮನಹಳ್ಳಿ ಗ್ರಾಮದ 20 ವರ್ಷಗಳ
ನಂತರ ರಾಮನಕೆರೆ ಕೂಡಿಬಿದ್ದ ಕೆರೆಗೆ ಬೇವಿನಹಳ್ಳಿ , ಶಿಂಗಟಗೆರೆ ,
ಎಂ.ಹನುಮನಹಳ್ಳಿ ತರಗನಹಳ್ಳಿ , ಮಾಸಡಿ , ನೇರಲಗುಂಡಿ , ತಿಮ್ಮಾಲಪುರ ,
ಸೇವಾಲಾಲಾನಗರ ಗ್ರಾಮಗಳ ರೈತರೊಂದಿಗೆ ತುಂಬಿದ ಕೆರೆಗೆ ವಿಶೇಷ
ಪೂಜೆ , ಬಾಗಿನ ಅರ್ಪಿಸಿ ಮಾತನಾಡಿದರು.
ಮನುಷ್ಯನ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ
ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂದಿನ
ದಿನಮಾನಗಳಲ್ಲಿಯೂ ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ, ಪ್ರತಿ
ವರ್ಷ ಕೆರೆಗಳು ತುಂಬುವ ಮೂಲಕ ರೈತರಿಗೆ ದಯೆ ತೋರಲಿ ಎಂದು
ಪ್ರಾರ್ಥಿಸಿದರು.
ಶಿಮುಲ ನಿರ್ದೇಶಕ ಹನುಮನಹಳ್ಳಿ ಬಿ.ಜಿ.ಬಸವರಾಜಪ್ಪ ಮಾತನಾಡಿ ತುಂಬಿ,
ಹರಿಯುತ್ತಿರುವ ನದಿಗಳು ಮತ್ತು ಕೆರೆಗಳಿಗೆ ಕೃತಜ್ಞತಾ ಅರ್ಪಣಾ
ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ
ಸಂಸ್ಕೃತಿಯಾಗಿದೆ. ರೈತರ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ
ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಕೆರೆಗಳು
ನೀರಿನಿಂದ ತುಂಬಿರುತ್ತದೆ ಎಂದು ಹೇಳಿದರು.
ಮಾಸಡಿ ಗಜೇಂದ್ರಪ್ಪ ಮಾತನಾಡಿ ಕಳೆದ ಎರಡು ವರ್ಷಗಳಿಂದ ಉತ್ತಮ
ಮಳೆಯಾಗುತ್ತಿದ್ದು, ಅದರಲ್ಲೂ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿ ಕೆರೆ
ಕಟ್ಟೆಗಳಿಗೆ, ಹಳ್ಳಕೊಳ್ಳಗಳಿಗೆ, ನೀರು ತುಂಬಿರುವ ಹಿನ್ನೆಲೆಯಲ್ಲಿ
ಕೆರೆಗಳನ್ನು ಪೂಜಿಸುವುದು ಕರ್ತವ್ಯವಾಗಿದೆ ಎಂದರು.
ಗಂಗಾ ಪೂಜೆಯಲ್ಲಿ ಡಿ ಎಸ್ ಪ್ರದೀಪ್ ಗೌಡ್ರ ರಮೇಶಗೌಡ , ನಾರಾಯಣಪ್ಪ , ಗ್ರಾಮ ಪಂಚಾಯಿತಿ
ಅಧ್ಯಕ್ಷೆ ಆಶ್ವೀನಿನಟರಾಜಪ್ಪ , ಸಿ.ವಿ.ಆಶೋಕ , ಎಂ.ಚಂದ್ರಪ್ಪ , ಶಿವಾನಂದಪ್ಪ ,
ಜಗದೀಶ್ , ಸಿದ್ದೇಶ್ವರ , ಶಂಕರಪ್ಪ ಶಿವಣ್ಣ ಸೇರಿದಂತೆ ಬೇವಿನಹಳ್ಳಿ , ಶಿಂಗಟಗೆರೆ ,
ಎಂ.ಹನುಮನಹಳ್ಳಿ ತರಗನಹಳ್ಳಿ , ಮಾಸಡಿ , ನೇರಲಗುಂಡಿ , ತಿಮ್ಮಾಲಪುರ ,
ಸೇವಾಲಾಲಾನಗರ ಗ್ರಾಮಗಳ ಮುಖಂಡರು ಗ್ರಾಮಸ್ಥರು ಹಾಗೂ
ಮುತ್ತೈದೆಯರು ಉಪಸ್ಥಿತರಿದ್ದು ಹೊನ್ನಾಳಿ ಎಂ.ಎಸ್.ಶಾಸ್ತ್ರೀಹೊಳೆಮಠ್
ಪುರೋಹಿತ್ಯದಲ್ಲಿ ಕೆರೆಗೆ ಗಂಗಾಪೂಜೆಯನ್ನು ನೆರವೇರಿಸಿ ಬಾಗಿನ
ನೀಡಲಾಯಿತು..