ನ್ಯಾಮತಿ ಃ ಗುರು ಎಷ್ಟು ಶ್ರೇಷ್ಠ ಎಂದರೆ ನೀವು ತಪ್ಪು ಮಾಡಿದ
ಶಿಕ್ಷೆಯನ್ನು ಕೊಡುವನು ಗುರು ಅನು ಗ್ರಹವನ್ನು ನೀಡುವ ಶಕ್ತಿ
ಗುರುವಿಗೆ ಇರುತ್ತದೆ ಎಂದು ಹೊಟ್ಯಾಪುರ ಕ್ಷೇತ್ರದ ಉಜ್ಜಯಿನಿ ಶಾಖಾ
ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು
ಅವರು ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ ಶನಿವಾರ
ರಾಂಪುರ ಮಠದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ
ಎರಡನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮದ ಸಾನಿದ್ಯ ವಹಿಸಿ
ಮಾತನಾಡಿದರು.
sವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಹೃದಯ ತಾಯಿಗುಣ
ವಿದ್ದಂತಿತ್ತು ಸಮ್ಮತಿ ಗುಣಗಳನ್ನು ಒಡೆಯರ್ ಚಂದ್ರಶೇಖರ ಶಿವಾಚಾರ್ಯ
ಸ್ವಾಮೀಜಿ ಹಾಗೂ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರಲ್ಲಿ ಕಂಡಿದ್ದು
ಒಳ್ಳೆಯ ಗುಣ ದವರು ಗದ್ದುಗೆ ಹೋಗುತ್ತಾರೆ ಕೆಟ್ಟ ಗುಣದವರು
ಗುದ್ದಿಗೆ ಹೋಗುತ್ತಾರೆ , ರಾಂಪುರ ಮಠಕ್ಕೆ ಲಕ್ಷಾಂತರ ಭಕ್ತರು
ಆರೋಗ್ಯ ದೃಷ್ಟಿಯಿಂದ ಪೂಜ್ಯರಲ್ಲಿ ಆಯುರ್ವೇದ ಚಿಕಿತ್ಸೆ ಪಡೆದು
ಕೊಳ್ಳುತ್ತಿದ್ದರು ಎಂದು ಹೇಳಿದರು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ
ಮಾತನಾಡಿ ಗುರುಗಳ ಸಾಧನೆ ರಾಜ್ಯಾದ್ಯಂತ ಭಕ್ತರಿಗೆ ಆಶ್ರಯ
ಕುಟುಂಬಗಳನ್ನು ಉದ್ಧಾರ ಮಾಡಿರುವುದು ನಾವು ಗುರುಗಳಲ್ಲಿ ಕಂಡಿದ್ದು
ಪುಣ್ಯ ಆರಾಧನೆ ಎಂದರೆ ಪುಣ್ಯವಂತರು , ಯಾರ ಮನಸ್ಸು ಒಂದೇ
ರೀತಿಯಾಗಿರುವುದು ಅಂತವರಿಗೆ ಪುಣ್ಯಾತ್ಮರು ಅಂತ ಕರೆಯುತ್ತಾರೆ
ಮನಸ್ಸು ಏನು ಹೇಳುತ್ತೆ ಸತ್ಯವಾಗಿರುವುದು ಭಕ್ತರ ಚಿಂತನೆ
ಮಾಡುತ್ತಿದ್ದರು ಕಾಯ ವಾಚ ಮನಸ್ಸು ಜಾತಿ ಭೇದಭಾವವಿಲ್ಲದೆ ಎಲ್ಲರೂ ಸೇರಿ
ಪುಣ್ಯರಾಧನೆ ಮಾಡಿದ್ದು ಶ್ರೀ ಗುರುವಿಗೆ ಪಾತ್ರ ರಾಗಿರುವಿರಿ ಎಂದು ಹೇಳಿದರು
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಎಸ್ ಹಾಲೇಶ್ , ಬಸವರಾಜ್ ಶಾಸ್ತ್ರಿ ನಿವೃತ್ತ
ಮುಖ್ಯ ಶಿಕ್ಷಕ ನಿಂಗರಾಜಪ್ಪ ಎಸ ವಿ ರುದ್ರೇಶ್ , ವಿಬಿ ರಾಮಚಂದ್ರಪ್ಪ ,
ಪಾಲಾಕ್ಷಪ್ಪ , ಎಸ್ ಎಂ ಬಸಯ್ಯ ವೀರಶೇಖÀರಯ್ಯ , ನಾಗರಾಜಪ್ಪ , ಅನುಷಾ
ಗುರುಪ್ರಸಾದ ಮಾತನಾಡಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ
ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಯಿತು.