ಹೊನ್ನಾಳಿ : 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ನಗರದ ಪ್ರಮುಖ ಬೀದಿಯಲ್ಲಿ ಸಾಗುವ ಮೂಲಕ ತಿರಂಗಾ ಯಾತ್ರೆ ನಡೆಸಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಮುಂದಾಳತ್ವದಲ್ಲಿ ತಾಲೂಕು ಆಡಳಿತದ ಎಲ್ಲಾ ಅಧಿಕಾರಿಗಳು, ನಗರದ ಎಲ್ಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರೀಕರು ತಿರಂಗಾಯಾತ್ರೆಯಲ್ಲಿ ಪಾಲ್ಗೋಂಡು ಗಮನ ಸೆಳೆದರು.
ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡ ಅಪಾರ ಪ್ರಮಾಣದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ರಾಷ್ಟ್ರಧ್ವಜ ಹಿಡಿದು, ಭಾರತ್ ಮಾತಾಕಿ ಜೈ,ವಂದೇ ಮಾತರಂ ಘೋಷಣೆ ಕೂಗುತ್ತಾ ಸಾಗಿದ್ದು ನೋಡುಗರಲ್ಲಿ ರಾಷ್ಟ್ರಪ್ರೇಮ ಮೂಡುವಂತೆ ಮಾಡಿತ್ತು.
ನಗರದ ಹಿರೇಕಲ್ಮಠದಿಂದ ಹೊರಟ ತಿರಂಗ ಯಾತ್ರೆ ನಗರದ ಮರಳೋಣಿ ರಸ್ತೆ, ಚಾಂದಿನಿ ವೃತ್ತ,ಟಿಎಂ ರಸ್ತೆ ಮೂಲಕ ಸಂಗೋಳ್ಳಿ ರಾಯಣ್ಣ ವೃತ್ತ ತಲುಪಿ ಟಿ.ಬಿ.ವೃತ್ತದಲ್ಲಿ ಸಂಪನ್ನಗೊಂಡಿತು. ಈ ನಡುವೆ ದಾರಿಯುದ್ದಕ್ಕೂ ಸಾರ್ವಜನಿಕರು ಭಾರತ್ ಮಾತಾಕೀ ಜೈ, ವಂದೇ ಮಾತಾಕೀ ಜೈ ಎಂದು ಘೋಷಣೆ ಕೂಗಿದರು.
ಸಂಗೋಳ್ಳಿ ರಾಯಣ್ಣ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ವಾತಂತ್ರೋತ್ಸವಕ್ಕೆ 75 ವರ್ಷ ತುಂಬಿದ ಈ ಸುದಿನದಲ್ಲಿ ತಿರಂಗಾಯಾತ್ರೆ ನಡೆಸುತ್ತಿರುವ ನಾವು ನೀವೇ ಧನ್ಯರು. ಇಂತಹ ಸದಾವಕಾಶ ಸಿಕ್ಕಿರುವುದು ನಮ್ಮೇಲ್ಲರ ಸುದೈವ. ಆದ್ದರಿಂದ ಪ್ರತಿಯೊಬ್ಬರೂ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಹಬ್ಬವನ್ನಾಗಿ ಆಚರಿಸುವಂತೆ ಕರೆ ನೀಡಿದರು.
ರಾಷ್ಟ್ರಧ್ವಜ ವಿಚಾರದಲ್ಲಿ ಯಾರೂ ರಾಜೀ ಆಗುವುದಿಲ್ಲಾ ತಮ್ಮ ತಮ್ಮ ಮನೆಯ ಮೇಲೆ ಪ್ರತಿಯೊಬ್ಬರೂ ರಾಷ್ಟ್ರಧ್ವಜ ಹಾರಿಸುವಂತೆ ತಾಲೂಕಿನ ಜನರಲ್ಲಿ ಮನವಿ ಮಾಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಈಗಾಗಲೇ 28 ಸಾವಿರ ಜನರು ಅವರ ಮನೆಗಳ ಮೇಲೆ ಹರ್‍ಘರ್ ತಿರಂಗಾದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದ್ದಾರೆಂದರು.
ಶಾಸಕರಿಂದ ಉಪಹಾರದ ವ್ಯವಸ್ಥೆ : ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹೊನ್ನಾಳಿ ನಗರದ ಶಾಲಾ ಕಾಲೇಜುಗಳ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ವಿದ್ಯಾರ್ಥಿಗಳಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಪಲಾವ್ ಹಾಗೂ ಕೇಸರಿಬಾತ್ ಉಪಹಾರದ ವ್ಯವಸ್ಥೆ ಮಾಡಿಸಿದ್ದರಲ್ಲದೇ ಖುದ್ದು ಮಕ್ಕಳಿಗೆ ಉಪಹಾರ ಬಡಿಸಿದರು.
ಮನೆಯ ಮೇಲೆ ಧ್ವಜರಾಹೋಣ : ಪ್ರಧಾನಮಂತ್ರಿಗಳು ಹರ್ ಘರ್ ತಿರಂಗಾಕ್ಕೆ ಕರೆ ನೀಡಿದ್ದು, ಹೊನ್ನಾಳಿಯ ಹಿರೇಕಲ್ಮಠದಲ್ಲಿರು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸದ ಮೇಲೆ ಶಾಸಕರು ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿದರು.
ಈ ಸಂದರ್ಭ ತಹಶೀಲ್ದಾರ್ ರಶ್ಮಿ, ಇಓ ರಾಮಬೋವಿ, ಪಿಡ್ಲ್ಯೂಡಿ ಎಇಇ ಗಂಗಪ್ಪ, ಪಿಆರ್‍ಇ ಎಇಇ ಅಜ್ಜಪ್ಪ, ಪುರಸಭೆ ಅಧ್ಯಕ್ಷ ರಂಗನಾಥ್,ಸಿಪಿಐ ದೇವರಾಜ್, ಪಿಎಸ್‍ಐ ಬಸವನಗೌಡ ಬಿರಾದರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಯಕರ್ತೆಯರು,ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪಾನ್ಯಾಸಕರು ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *