ಹೊನ್ನಾಳಿ: ಸ್ವಾತಂತ್ರ್ಯೋತ್ಸವ ಎಂಬ ಹಬ್ಬದಲ್ಲಿ ನಾವೇಲ್ಲರೂ ಪಾಲ್ಗೊಳ್ಳಬೇಕು. ದೇಶ ನಮಗೆ ಬಹಳ ನೀಡಿದೆ ಅದನ್ನು ಸಂಭ್ರಮಾಚರಣೆಯ ಮೂಲಕ ಮನೆಮನೆಗೆ ತಲುಪಿಸಬೇಕು ಎಂದು ಮಾಜಿ ಶಾಸಕ ಡಿ.ಜಿ ಶಾಂತನಗೌಡ ಕರೆಕೊಟ್ಟರು.
ಪಟ್ಟಣದ ರಾಜ ಬೀದಿಯಲ್ಲಿ ಭಾನುವಾರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಹಬ್ಬದಲ್ಲಿ ಈ ಬಾರಿ ಎಲ್ಲರೂ ಸಕ್ರೀಯವಾಗಿ ಭಾಗವಹಿಸುತ್ತಿರುವುದು ಸಂತೋಷ ತಂದಿದೆ. ರ್ಯಾಲಿಯ ಮೂಲಕ ದೇಶ ಕಂಡ ಮಹಾನ್ ವ್ಯಕ್ತಿಗಳನ್ನು ಈ ದಿನ ಸ್ಮರಿಸುವ ಮೂಲಕ ಅವರಿಗೆ ಗೌರವವನ್ನು ಅರ್ಪಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಘಟಕದ ಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪ, ಹಿಂದುಳಿದ ವರ್ಗದ ಉಪಾಧ್ಯಕ್ಷ ಎಚ್.ಎ ಉಮಾಪತಿ, ಕಾಂಗ್ರೇಸ್ ಮುಖಂಡರುಗಳಾದ ಬಿ.ಸಿದ್ದಪ್ಪ, ಎಚ್.ಬಿ ಶಿವಯೋಗಿ, ಡಾ. ಈಶ್ವರ್ ನಾಯ್ಕ್ , ಸುರೇಂದ್ರ ಗೌಡ, ಮಧುಗೌಡ, ರಂಜಿತ್, ಪ್ರಶಾಂತ್ ಬಣ್ಣಜ್ಜಿ ಇತರರು ಇದ್ದರು.