ನ್ಯಾಮತಿ ಪೊಲೀಸ್‍ಠಾಣೆ ವತಿಯಿಂದ 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ ಸಲುವಾಗಿ ಭಾನುವಾರ ಸಿಪಿಐ ಟಿ.ವಿ.ದೇವರಾಜ, ಪಿಎಸ್‍ಐ ಪಿ.ಎಸ್.ರಮೇಶ ನೇತೃತ್ವದಲ್ಲಿ ಪೊಲೀಸರು ಮತ್ತು ಗೃಹರಕ್ಷಕದಳ ಸಿಬ್ಬಂದಿ ಬೈಕ್‍ರ್ಯಾಲಿ ಮೂಲಕ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ವಾಹನ ಚಾಲನೆ ಮಾಡುವಂತೆ ಹೊನ್ನಾಳಿ ಸಿಪಿಐ ಟಿ.ವಿ.ದೇವರಾಜ ಮನವಿ ಮಾಡಿದರು.
ಪಟ್ಟಣದ ಪೊಲೀಸ್‍ ಠಾಣೆಯಿಂದ 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ ಸಲುವಾಗಿ ಭಾನುವಾರ ಪೊಲೀಸರು ಮತ್ತು ಗೃಹರಕ್ಷಕದಳ ಸಿಬ್ಬಂದಿ ಬೈಕ್‍ರ್ಯಾಲಿ ಮೂಲಕ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿಮೂಡಿಸಲು ಬೈಕ್‍ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.


ನ್ಯಾಮತಿ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಈಚೆಗೆ ಹೆಚ್ಚಿನ ಯುವಕರು ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತದಲ್ಲಿ ಮರಣ ಹೊಂದುವ ಪ್ರಕರಣ ಜಾಸ್ತಿಯಾಗಿವೆ. ಸಂಚಾರ ನಿಯಮ ಪಾಲನೆಗೆ ಸಾರ್ವಜನಿಕರು ಸಹಕಾರ ನೀಡುವಂತೆ ಪಿಎಸ್‍ಐ ಪಿ.ವಿ.ರಮೇಶ ಮನವಿ ಮಾಡಿದರು.
ಸುರಹೊನ್ನೆ, ನ್ಯಾಮತಿ ಮತ್ತು ಸವಳಂಗದ ಸರ್ಕಲ್‍ಗಳಲ್ಲಿ ಜನಜಾಗೃತಿ ಮೂಡಿಸಲಾಯಿತು.
ಗೃಹರಕ್ಷಕದಳದ ಕಮಾಂಡರ್ ಪ್ಲಟೂನ್ ಎಂ.ರಾಘವೇಂದ್ರ ಮತ್ತು ಗೃಹರಕ್ಷಕರು, ರೂರಲ್‍ಕ್ಲಬ್ ವ್ಯವಸ್ಥಾಪಕ ಸಂತೋಷ ಅಪರಂಜಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಹಾಲಾರಾಧ್ಯ, ಎನ್.ಆರ್.ಗಿರೀಶ, ದಿನೇಶ, ಬಾಂಬೆ ನಾಗರಾಜಇದ್ದರು.

Leave a Reply

Your email address will not be published. Required fields are marked *