ಹುಣಸಘಟ್ಟ: ದೇಶವನ್ನು ದಾಸ್ಯ ಸಂಕೋಲೆಯಿಂದ ಬಿಡಿಸಲು ಹೋರಾಡಿದ ಮಹಾನೀಯರ ನೆನಪು ಸದಾ ಶಾಶ್ವತ ಎಂದು ಸಾಸ್ವೆಹಳ್ಳಿ ಎಡಿವಿ ಎಸ್ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಡಾ. ಎಸ್ ಎಚ್ ಕೃಷ್ಣಮೂರ್ತಿ ಹೇಳಿದರು.
ಸಾಸ್ವೆಹಳ್ಳಿ ಯ ಎಡಿವಿಎಸ್ ಕಾಲೇಜಿನಲ್ಲಿ ನಡೆದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಅನೇಕ ಮಹಾನೀಯರ ಹೋರಾಟ ತ್ಯಾಗದ ಫಲವೇ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ. ಈ ವೀರರನ್ನು ಸ್ಮರಿಸೋಣ. ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟೋಣ ಎಂದರು.
ಸ್ವಾತಂತ್ರ್ಯದ ಹಾದಿ ಸುಲಭದ್ದಾಗಿರಲಿಲ್ಲ ಆದರೆ ಅದೆಷ್ಟೋ ಮಹನೀಯರು ಈ ಕಷ್ಟದ ಹಾದಿಯಲ್ಲಿ ಶ್ರಮಿಸಿ ದೇಶವನ್ನು ದಾಸ್ಯದಿಂದ ಮುಕ್ತ ಗೊಳಿಸಿದ್ದಾರೆ. ಇಂತಹ ಕೆಚ್ಚೆದೆಯ ವೀರರನ್ನು ಪಡೆದ ನಾವೇ ಧನ್ಯರು. ನಮ್ಮ ಜಾತಿ-ಮತ ಪಂಥಗಳು ಯಾವುದೇ ಇರಲಿ ಅಂತಿಮವಾಗಿ ನಾವೆಲ್ಲರೂ ಭಾರತೀಯರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಚ್ ಬಿ ಗಣಪತಿ ವಯಸಿ ಮಾತನಾಡಿದರು. ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು ಶ್ರೀಮತಿ ಶಾಂತ ಕೃಷ್ಣಮೂರ್ತಿ ಹಾಗೂ ಟ್ರಸ್ಟ್ ನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಮನರಂಜಿಸಿದರು.