ನ್ಯಾಮತಿ: ರೈತ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗೆ ಕೃಷಿಯೊಟ್ಟಿಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ನಡೆಸುತ್ತಿದ್ದು ಇತ್ತೀಚೆಗೆ ಹೈನುಗಾರಿಕೆ ಮಾಡುವವರು ಸಂಕಷ್ಟದಲ್ಲಿದ್ದು 1ರೂ ಬದಲಿಗೆ 3ರೂ ದರವನ್ನು ಹೆಚ್ಚಿಸಬೆಕೆಂದು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ನಿರ್ದೇಶಕ ವಿರೇಶಪ್ಪ.ಕೆ. ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಇದೇ ಆ11 ರಂದು ಶಿಮೂಲ್ ಒಕ್ಕೂಟವು 1ರೂ ಹಾಲಿನ ದರ ಹೆಚ್ಚಳ ಮಾಡಿದೆ ಅದು ಸಾಕಾಗುವುದಿಲ್ಲ ಎಂದರು.
ಪ್ರಸ್ತುತ ದಿನಗಳಲ್ಲಿ ಜಾನುವಾರಗಳಿಗೆ ನೀಡುವ ಆಹಾರ ದರ ಜಾನುವಾರಗಳ ನಿರ್ವಹಣೆ ಮಾಡುವುದು ಸೇರಿದಂತೆ ಇತರೆ ಖರ್ಚು ವೆಚ್ಚಗಳಿದ್ದು ರೈತರು ಸಂಕಷ್ಟದಲ್ಲಿದ್ದಾರೆ ಒಕ್ಕೂಟವು ರೈತರಿಗೆ ಪ್ರತಿ ಲೀಟರ್‍ಗೆ 30ರೂ ದರ ಭರ್ತಿ ನೀಡುವ ಮೂಲಕ ರೈತರ ನೆರವಿಗೆ ಬರಬೇಕಿದೆ ಎಂದರು.
ಶಿವಮೊಗ್ಗ ಹಾಲು ಒಕ್ಕೂಟಕ್ಕೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಪ್ರತಿ ದಿನ 7ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಶಿಮೂಲ್ ಒಕ್ಕೂಟ 2014ರಿಂದಲೂ ಮೂಲ ಸೌಲಭ್ಯಕ್ಕಾಗಿ ಪ್ರತಿ 1 ಲೀಟರ್ ಹಾಲಿಗೆ 1ರೂ ಕಡಿತ ಮಾಡುತ್ತಿದ್ದು ಇಲ್ಲಿಯ ತನಕ ಸಂಗ್ರವಾಗಿರುವ ಹಣದ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ ಅದರ ಬಗ್ಗೆ ಮಾಹಿತಿ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ರೈತರಿಂದ 28.30ಪೈಸೆಗೆ ಕೊಳ್ಳುವ ಒಕ್ಕೂಟವು ಗ್ರಾಹಕರಿಗೆ ಪ್ರತಿ ಲೀಟರ್‍ಗೆ ಪ್ಯಾಟ್, ಕೆನೆಭರಿತ ಇತರೆ ವಿಭಾಗಗಳನ್ನು ಮಾಡಿ ಕನಿಷ್ಟ 42ರೂ 1ಲೀಟರ್ ನಂತೆ ಮಾರಾಟ ಮಾಡುತ್ತಾರೆ ಹೀಗಿದ್ದರು ರೈತರಿಗೆ ಹಾಲಿಗೆ ನೀಡಲು ಮಾತ್ರ ಹಿಂದೇಟು ಹಾಕುವುದು ಎಷ್ಟು ಸರಿ ಎಂದರು.
ಹಾಲು ಉತ್ಪಾದಕರ ಸಂಘದ ಮೂಲ ಭೂತ ಸೌಕರ್ಯಕ್ಕಾಗಿ 50ಪೈಸೆ ನೀಡುವಂತೆಯೂ ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕೆ.ಟಿ.ವೀರಭದ್ರಪ್ಪ, ಎಚ್.ರುದ್ರೇಶಪ್ಪ, ಎ.ಕಾವ್ಯಮ್ಮ ಮತ್ತು ನೊಂದ ಉತ್ಪಾದಕರು ಕೆಂಚಪ್ಪ ಇದ್ದರು.
ಹೆಚ್ಚಿನ ಮಾಹಿತಿಗಾಗಿ ವಿರೇಶ್.ಕೆ. ಮಾಜಿ ಅಧ್ಯಕ್ಷರು ನಿರ್ದೇಶಕರು ಹಾಲು ಉತ್ಪಾದಕರ ಸಹಕಾರ ಸಂಘ ನ್ಯಾಮತಿ.
ಸಂಪರ್ಕಿಸಿ; 9916882931

Leave a Reply

Your email address will not be published. Required fields are marked *