ನ್ಯಾಮತಿ ತಾಲೂಕು ಪಲನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯುವ ವಿಚಾರವಾಗಿ ಕಂದಾಯ ಅಧಿಕಾರಿ ಪಿಡಿಒ ನೇತೃತ್ವದಲ್ಲಿ ತುರ್ತು ಸಭೆ.
ನ್ಯಾಮತಿ ತಾಲೂಕಿನ ಪಲವನಳ್ಳಿ ಗ್ರಾಮ ಪಂಚಾಯಿತಿಯಲ್ಲಿಂದು ದಿನಾಂಕ 20.8. 2022ರ ಶನಿವಾರದಂದು ನಡೆಯುವ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯುವ ನಿಮಿತ್ತ ಪಲವನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರ ನೇತೃತ್ವದಲ್ಲಿ ತುರ್ತು ಪೂರ್ವಭಾವಿ ಸಭೆಯನ್ನುಮಾಡಿ ಚರ್ಚಿಸಿಲಾಯಿತು.
ನ್ಯಾಮತಿ ಕಂದಾಯ ಅಧಿಕಾರಿ ಸುಧೀರ್ ಮಾತನಾಡಿ ತಾಲೂಕ್ ಮಟ್ಟದ 38 ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸುವವರು. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಏನೇ ಸಮಸ್ಯೆಗಳಿದ್ದರೂ ಅಂದಿನ ದಿವಸ ಜಿಲ್ಲಾಧಿಕಾರಿಗಳ ಹಾಗೂ ತಾಲೂಕ್ ಮಟ್ಟದ ಅಧಿಕಾರಿಗಳ ಹತ್ತಿರ ಸಮಸ್ಯೆಗಳನ್ನು ಹೇಳಿ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ನಂತರ ಪುನಃ ಃ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಪ್ರಾರಂಭವಾಯಿತು.
ಮುಸ್ಸೇನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯ್ಕ ಮಾತನಾಡಿ ನಮ್ಮ ಊರಿನಲ್ಲಿ ಕೊಳಚೆಗುಂಡಿಯಲ್ಲಿ ಮಗು ಬಿದ್ದು ಸಾವನ್ನಪ್ಪಿದೆ ನಮ್ಮ ಊರಿನಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಇಂತಹ ಅನಾಹುತಗಳು ನಡೆಯುತ್ತಿವೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನೀವು ಏನು ಕೆಲಸ ಮಾಡುತ್ತಿದ್ದೀರಿ ಎಂದು ತರಾಟೆ ತೆಗೆದುಕೊಂಡು ಮುಸೇನಾಳ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಬಂದು ಭೇಟಿ ನೀಡಿ ನಮ್ಮ ಊರಿನ ಸಮಸ್ಯೆಯನ್ನು ಆಲಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಯಾದ ಸುಧೀರ್ ಅವರಿಗೆ ಒತ್ತಡ ಹಾಕಿ ಎನ್ ಆರ್ ಐ ಜಿ ಕೆಲಸ ಮಾಡುತ್ತೇವೆ ಎಂದು ಗ್ರಾಮ ಪಂಚಾಯಿತಿಯಿಂದ ಸಿ ಎಸ್ ರವರಿಗೆ ಎಸ್ಟಿಮೇಟ್ ಕಳಿಸಿದ್ದೆವು ಅದನ್ನ ವಾಪಸ್ ಕಳಿಸಿದ್ದಾರೆ ಎಂದು ಆರೋಪಿಸುತ್ತಾ ಸರ್ಕಾರದಿಂದ 15ನ ಫೈನಾನ್ಸ್ ಹಣ ಬಿಟ್ಟರೆ ಸರ್ಕಾರದಿಂದ ಯಾವುದೇ ಹಣ ಇಲ್ಲಿವರೆಗೆ ಬಂದಿಲ್ಲ ಗ್ರಾಮ ಪಂಚಾಯಿತಿ ಚುನಾವಣೆಯಾಗಿ ಇಲ್ಲಿಗೆ ಎರಡು ವರ್ಷ ತುಂಬಿದ ನಂತರವೂ ಸಹ ಒಂದು ಕೆಲಸ ಮಾಡಲಿಕ್ಕೆ ಸಾಧ್ಯವಾಗಿಲ್ಲ, ಹೊಲಿಗೆ ಯಂತ್ರ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗದೆ ಅಪ್ಲಿಕೇಶನ್ ತೆಗೆದುಕೊಂಡಿದ್ದೀರಿ ಅದನ್ನು ತಡೆಹಿಡಿಯಬೇಕು, ಕೆಡಿಪಿ ಮೀಟಿಂಗ್ ನಡೆಯುತ್ತಿಲ್ಲ, ನಮ್ಮ ಊರಿನಲ್ಲಿ ನೀರು ಗಂಟೆ ಕೆಲಸ ಮಾಡಿದರೂ ವೇತನ ಇಲ್ಲ ,ಜಗ್ ಬೋರು ರಿಪೇರಿ ಸಹ ಮಾಡಿಸಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅನಿತಾ, ಉಪಾಧ್ಯಕ್ಷರಾದ ಗೋವಿಂದ್ ರಾಜ್, ಸದಸ್ಯರುಗಳಾದ ಪ್ರಕಾಶ್ ನಾಯ್ಕ್ ಮುಸ್ಸೇನಾಳ, ನಾಗೇಶ್ ನಾಯ್ಕ್, ಪಿ ಆರ್ ಪ್ರವೀಣ್, ನಟರಾಜ್, ನೇತ್ರಮ್ಮ ,ಪಿಡಿಒ ವಿಜಯ್ ಕುಮಾರ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.