ಹೊನ್ನಾಳಿ ಆಗಸ್ಟ್ 17 ಪಟ್ಟಣದಲ್ಲಿರುವ ನ್ಯಾಮತಿ ರಸ್ತೆ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಎದುರುಗಡೆ ಇರುವ ಶ್ರೀ ಚನ್ನಪ್ಪ ಸ್ವಾಮಿ ವಾಣಿಜ್ಯ ಮಳಿಗೆಯಲ್ಲಿ ಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ ಬಸವಪಟ್ಟಣ ಯೋಜನಾ ಕಚೇರಿಯನ್ನು ನೂತನವಾಗಿ ಪ್ರಾರಂಭಿಸಲಾಯಿತು. ಇದರ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕ ವಿ ವಿಜಯಕುಮಾರ್ ನಾಗನಾಳ್ ಜ್ಯೋತಿಯನ್ನು ಬೆಳಗಿಸದರ ಮೂಲಕ ಚಾಲೆನೆ ನೀಡಿದರು .


ಕಚೇರಿ ಉದ್ಘಾಟಿಸಿದ ಜಿಲ್ಲಾ ನಿರ್ದೇಶಕ ವಿ ವಿಜಯಕುಮಾರ್ ನಾಗನಾಳ್ ಮಾತನಾಡಿ 12 ವರ್ಷಗಳ ಹಿಂದೆ ಹೊನ್ನಾಳಿಯಲ್ಲಿ ಯೋಜನಾ ಕಚೇರಿ ಪ್ರಾರಂಭಿಸಿದ್ದವು .ಆ ಕಚೇರಿಯಲ್ಲಿ ಸುಮಾರು ನಾಲ್ಕರಿಂದ ಐದು ಸಾವಿರ ಸ್ತ್ರೀಶಕ್ತಿ ಸಂಘಗಳು ಆಗಿರುವ ಕಾರಣ ಕೆಲಸವನ್ನು ನಿಭಾಯಿಸಲು ತೊಂದ್ರೆ ಆಗಿರುವುದರಿಂದ ಬಸವಪಟ್ಟಣ ಯೋಜನೆ ಕಚೇರಿಯನ್ನು ನೂತನವಾಗಿ ಪ್ರಾರಂಭ ಮಾಡಲಾಗಿದೆ. ಈ ಕಚೇರಿ ಅಡಿಯಲ್ಲಿ 1800ಕ್ಕೂ ಹೆಚ್ಚು ಶ್ರೀಶಕ್ತಿ ಸಂಘಗಳು ಬರುತ್ತವೆ ಎಂದು ತಿಳಿಸಿದರು.


ಉಪಸ್ಥಿತಿಯಲ್ಲಿ ಹೊನ್ನಾಳಿ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಬಸವರಾಜ್ ಅಂಗಡಿ, ಬಸವಪಟ್ಟಣದ ಯೋಜನಾಧಿಕಾರಿ ನವೀನ್ ನಾಯಕ್, ಸುರೇಶ್ ಹೊಸಕೇರಿ ನಿಕಠಪೂರ್ವ ಅಧ್ಯಕ್ಷರು ಜನ ಜಾಗೃತಿ ವೇದಿಕೆ ದಾವಣಗೆರೆ, ಲಿಂಗರಾಜ್ ಹವಳದ್, ಕತ್ತಿಗೆ ನಾಗರಾಜ್, ಯೋಗೇಶ್ ಮುಕ್ತೇನಳ್ಳಿ, ಮೇಲ್ವಿಚಾರಕರಾದ ನಾಗರಾಜ್, ಧರ್ಮಸ್ಥಳ ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸರ್ವ ಸದಸ್ಯರುಗಳು ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಮಹಿಳೆಯರು ಸಹ ಭಾಗಿಯಾಗಿದ್ದರು

Leave a Reply

Your email address will not be published. Required fields are marked *