ಹನಗವಾಡಿ: ಶ್ರೀಕೃಷ್ಣನ ಸಂಭ್ರಮದ ತೊಟ್ಟಿಲೋತ್ಸವ
ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಹನಗವಾಡಿ ಗ್ರಾಮದ ಶ್ರೀ ವೇಣುಗೋಪಾಲ ದೇಗುಲದಲ್ಲಿ ಶುಕ್ರವಾರ ಶ್ರೀಕೃಷ್ಣನ ಗೋಕುಲಾಷ್ಟಮಿ ಅಂಗವಾಗಿ ಶ್ರೀಕೃಷ್ಣನ ತೊಟ್ಟಿಲೋತ್ಸವ ದ ಆಚರಣೆಯನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಶುಕ್ರವಾರ ಮುಂಜಾನೆಯೇ ಗ್ರಾಮದ ಆಂಜನೇಯ ಹಾಗೂ ವೇಣುಗೋಪಾಲ ಉತ್ಸವ ಮೂರ್ತಿಗಳ ಅಭಿಷೇಕ ಮಹಾಮಂಗಳಾರತಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಿ ನಂತರ ದೇವರ ಹಾಗೂ ಮಕ್ಕಳ ದವಸ-ಧಾನ್ಯ ನಾಣ್ಯಗಳ ತುಲಾಭಾರ ನಡೆಯಿತು.
ಗ್ರಾಮದ ಮುತ್ತೈದೆಯರು ವಿವಿಧ ಪುಷ್ಪಾಲಂಕಾರದಿಂದ ಶೃಂಗಾರಗೊಂಡ ಹೂವಿನ ತೊಟ್ಟಿಲಲ್ಲಿ ವೇಣುಗೋಪಾಲ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿಪೂರ್ವಕವಾಗಿ ಜೋಜೋ…. ಶ್ರೀಕೃಷ್ಣನ ಜಾನಪದ ಸೊಗಡಿನ ಹಾಡುಗಳನ್ನು ಸೊಗಸಾಗಿ ಹಾಡಿದರು. ಶ್ರೀಕೃಷ್ಣನ ವೇಷದಾರಿ ಮಕ್ಕಳನ್ನು ತೋಟದಲ್ಲಿ ಹಾಕಿ ನಾಮಕರಣ ಶಾಸ್ತ್ರ ನೆರವೇರಿಸಿ ಮಗುವಿಗೆ ಶ್ರೀಕೃಷ್ಣ ಎಂದು ನಾಮಕರಣ ಮಾಡಲಾಯಿತು. ನಂತರ ಶ್ರೀ ಕೃಷ್ಣ ರುಕ್ಮಿಣಿ ವೇಷದಾರಿ ಮಕ್ಕಳ ಮಕ್ಕಳು ಮೊಸರಿನ ಮಡಿಕೆಯನ್ನು ಹೊ ಡೆಸಲಾಯಿತು. ನೆರೆದ ಭಕ್ತರು ಶ್ರೀಕೃಷ್ಣನ ಸಹಸ್ರಾರು ನಾಮಾವಳಿ ಯನ್ನು ಬಜಿಸಿ ಶ್ರೀಕೃಷ್ಣ ಮಹಾರಾಜಕಿ ಜೈ ಎಂಬ ಘೋಷಣೆಗಳು ಮೊಳಗಿದವು.
ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ವೇಣುಗೋಪಾಲ ಆಂಜನೇಯ ಸ್ವಾಮಿ ಸಮಿತಿ ಪದಾಧಿಕಾರಿಗಳು ಗ್ರಾಮದ ಮುಖಂಡರುಗಳಾದ ಜಿ ರಂಗಪ್ಪ, ರಾಘವೇಂದ್ರ,ಶಶಿಧರ, ಸುರೇಶ್, ಚಂದ್ರು ಏಳುಕೋಟಿ, ಕೃಷ್ಣಮೂರ್ತಿ ಶೆಟ್ರು ಬಾಲಸ್ವಾಮಿ ಹಾಗೂ ಹೋಬಳಿ ವ್ಯಾಪ್ತಿಯ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.