ಹೊನ್ನಾಳಿ ಆಗಸ್ಟ್ 20 ಸುಂಕದಕಟ್ಟೆ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ 21 22 ನೇ ಸಾಲಿನ ನೂತನ ಎಸ್ಡಿಎಂಸಿ ಅಧ್ಯಕ್ಷರಾದ ಎಸ್ಎಂ ಮೋಹನ್ ನೇತೃತ್ವದಲ್ಲಿ ಪ್ರಥಮ ಸಭೆಯನ್ನು ನಡೆಸಲಾಯಿತು.
ಇದರ ಅಧ್ಯಕ್ಷತೆಯನ್ನು ನೂತನ ಎಸ್ ಡಿ ಎಂ ಸಿ ಅಧ್ಯಕ್ಷತೆ ಮೋಹನ್ ಎಂ ಸಿ ರವರು ವಹಿಸಿ ಮಾತನಾಡಿ ನನ್ನ ಅಧ್ಯಕ್ಷತೆ ಅವಧಿಯಲ್ಲಿ ಪೋಷಕರು ಮತ್ತು ಶಿಕ್ಷಕರ ಎಸ್ ಡಿ ಎಂ ಸಿ ಸದಸ್ಯರ ಸಹಕಾರದೊಂದಿಗೆ ಶಾಲಾ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಸಿದ್ದಪ್ಪನವರು ನಂತರ ಮಾತನಾಡಿ ಗೋವಿನಕೋವಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಇದೇ ತಿಂಗಳು 25/8/2022 ರಂದು ಸುಂಕದಕಟ್ಟೆ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ನಡೆಸಲಾಗುವುದು ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ ಮಮತಾ ಸದಸ್ಯರಾದ ಡಿ ಎಚ್ ಮಂಜುನಾಥ್, ಮಂಜುನಾಥ್ ಎಂ, ಹೇಮಂತ್, ರೇಕಮ್ಮ, ಗಿರೀಶ್, ರಂಗನಾಥ ಎಕೆ, ಶಿವಮೂರ್ತಿ ಎಕೆ, ಅನಿತಾ, ರೂಪ ,ಲಕ್ಷ್ಮೀ ,ಸಿಎನ್ ಮಂಜಪ್ಪ ,,ಎಕೆ ಹನುಮಂತಪ್ಪ, ಮುಖ್ಯ ಶಿಕ್ಷಕ ಸಿದ್ದಪ್ಪ ಸಹ ಶಿಕ್ಷಕರು ಗ್ರಾಮ ಪಂಚಾಯಿತಿ ಸದಸ್ಯರು ಗಳಾದ ಶ್ರೀನಾಥ್ ಸಹ ಭಾಗಿಯಾಗಿದ್ದರು.
