ಕೃಷ್ಣ ಮತ್ತು ರಾಧೆ ವೇಷದಲ್ಲಿ ಮಿಂಚಿದ ಪುಟಾಣಿಗಳು ನ್ಯಾಮತಿ ತಾಲೂಕು ಗೋವಿಕೋವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಶ್ರೀ ಕೃಷ್ಣನ ಮಹಾನ್ ತತ್ವಜ್ಞಾನಿ ಆಗಿರುವುದರಿಂದ ಗೋವಿನ ಕೊವಿ ಗ್ರಾಮದ ತಾಯಂದಿರು ತಮ್ಮ ಮಕ್ಕಳಿಗೆ ಕೃಷ್ಣ ಮತ್ತು ರಾಧಿಯನ್ನು ವೇಷ ಭೂಷಣವನ್ನು ಹಾಕಿಕೊಂಡು ಬಂದು ಕೃಷ್ಣ ಮತ್ತು ರಾಧೆಯನ್ನು ಮಕ್ಕಳ ರೂಪದಲ್ಲಿ ಕಂಡರು. ಸುಮಾರು 30ಕ್ಕೂ ಹೆಚ್ಚು ಎಲ್ ಕೆ ಜಿ,ಯು ಕೆ ಜಿ ಮಕ್ಕಳು ಕೃಷ್ಣ ಮತ್ತು ರಾಧೆಯ ರೂಪದಲ್ಲಿ ಕಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ವೇತ .ಶಾಲೆ ಮುಖ್ಯೋಪಾಧ್ಯಯ ಈಶ್ವರಪ್ಪ. ಶಿಕ್ಷಕರಾದ ಚೆನ್ನೇಶಪ್ಪ , ಪ್ರೌಢಶಾಲೆಯ ಎಸ್ ಡಿ ಎಂ ಸಿ ಸದಸ್ಯ ವಿ ಎಚ್ ರುದ್ರೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ್ ಕೆ ಎಚ್, ಸದಸ್ಯರಾದ ಸುರೇಶ್, ಮಂಜುನಾಥ್, ಪ್ರಭು, ರಮೇಶ್, ರಘು ಗೋವಿನಕೋವಿ ಗ್ರಾಮದ ಪೋಷಕರು ಸಹ ಭಾಗಿಯಾಗಿದ್ದರು.