ನ್ಯಾಮತಿ ಃ ನ್ಯಾಮತಿ ಪಟ್ಟಣದಲ್ಲಿ ಆಗಸ್ಟ್ 22 ರ ಸೋಮವಾರ ಬೇಡಜಂಗಮ ಸಮುದಾಯ ಬಂಧುಗಳಿಂದ ಧಾರ್ಮಿಕ ಭೀಕ್ಷಾಟನೆಯ ಮೂಲಕ ಪ್ರತಿಭಟನೆ ನೆಡೆಸಲಾಗುವುದು ಎಂದು ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಗಳ ಒಕ್ಕೂಟದ ಮುಖಂಡರು ತಿಳಿಸಿದರು.
ಆಗಸ್ಟ್ 22 ರ ಸೋಮವಾರ ಮದ್ಯಾಹ್ನ 12 – 30 ನ್ಯಾಮತಿ ಪಟ್ಟಣದ ಕಲ್ಮಠದಿಂದ ಬೇಡಜಂಗಮದ ಸಮುದಾಯದ ಬಂಧುಗಳು ಬೆಂಗಳೂರು ನಗರದ ಫ್ರೀಡಂ ಪಾರ್ಕನಲ್ಲಿ ಕಳೆದ 51 ದಿನಗಳಿಂದ ನಮ್ಮ ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಗಳ ಒಕ್ಕೂಟದ ಒಕ್ಕೂಟದ ಅಧ್ಯಕ್ಷರಾದ ಬಿ.ಡಿ. ಹೀರೆಮಠಅವರು ಸಮುದಾಯದ ಬೇಡಿಕೆಗಳನ್ನು ಈಡೇರುಸುವಂತೆ ನಡೆಸುತ್ತೀರುವ ಸತ್ಯಪ್ರತಿಪಾದನ ಸತ್ಯಗ್ರಹವನ್ನು ಬೆಂಬಲಿಸಿ ನಮ್ಮ ಸಮುದಾಯದ ಕುಲ ಕಸುಬಾಗಿರುವ ಧಾರ್ಮಿಕ ಭೀಕ್ಷಾಟನೆಯ ಕಾಯಕವೃತ್ತಿಯನ್ನು ನಮ್ಮ ಲಾಂಛನಗಳಾದ ಜೋಳಿಗೆ ಬೆತ್ತ ಹಿಡಿದು ನ್ಯಾಮತಿ ಪಟ್ಟಣದ ರಾಜಬೀದಿಗಳಲ್ಲಿರುವ . ಮನೆ ಮತ್ತು ಅಂಗಡಿಗಳಿಗೆ ಹಾಗೂ ಕಛೇರಿಗಳಿಗೆ ನಮ್ಮ ಸಮುದಾಯದ ಪರಂಪರೆಯ ಕುಲ ಕಸುಬಾಗಿರುವ ಧಾರ್ಮಿಕ ಭೀಕ್ಷಾಟನೆಯನ್ನು ಮಾಡಿ ತಾಲೂಕು ಕಛೇರಿಗೆ ತೆರಳಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ , ತಹಶೀಲ್ದಾರ್‍ಗಳ ಮೂಲಕ ಮನವಿ ಪತ್ರ ನೀಡಲಾವುದು ಈ ಒಂದು ಭೀಕ್ಷಾಟನೆಯ ಪ್ರತಿಭಟನೆ ಮೆರವಣೆಗೆಯಲ್ಲಿ ಪರಂಪರೆಯ ಕುಲ ಕಸುಬಾಗಿರುವ ಧಾರ್ಮಿಕ ಭೀಕ್ಷಾಟನೆಯಲ್ಲಿ ತಾಲೂಕಿನ ಬೇಡಜಂಗಮ ಸಮುದಾಯ ಬಂಧುಗಳು ಲಾಂಛನಗಳಾದ ಜೋಳಿಗೆ ಬೆತ್ತ ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು
ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಗಳ ಒಕ್ಕೂಟದ ಮುಖಂಡರಾದ ಟಿ.ಎಂ.ಕುಮಾರಸ್ವಾಮಿ ,ಮರಿದೇವರಮಠದ ಸಿದ್ದಯ್ಯ , ಒಡೆಯರ ಹತ್ತೂರು ಬಸಯ್ಯ , ವೀರಭದ್ರಯ್ಯ , ದೊಡ್ಡೇರಿ ಡಿ.ಎಂ.ಹಾಲಸ್ವಾಮಿ ಡಿ.ಎಂ.ಲೋಕಯ್ಯ ಮನವಿ ಮಾಡಿದರು.