ನ್ಯಾಮತಿ: ತಾಲೂಕು ಬೆಳಗುತ್ತಿ-ಹೋಬಳಿ ಪಲವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಂದು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಗಾಟನೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ ರೇಣುಕಾಚಾರ್ಯ ದೀಪವನ್ನು ಬೆಳಗೆಸುವುದರ ಮೂಲಕ ಉದ್ಗಾಟಿಸಿದರು.
ನಾಡಗೀತೆಯನ್ನು ಮಕ್ಕಳು ಹಾಡುವುದರ ಮೂಲಕ ಪ್ರಾರ್ಥನೆ ಮಾಡಿದರು.
ಸ್ವಾಗತ ಭಾಷಣವನ್ನು ತಾಲೂಕು ನಿರ್ವಣಾಧೀಕಾರಿ ರಾಮ್ ಬೋವಿ ನಡೆಸಿ ಕೊಟ್ಟರು.
ನಂತರ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯರವರು ಸರ್ಕಾರದ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ 30, ನಿರ್ಗತಿಕ ವಿಧುವಾ ವೇತನ 8 ಜನರಿಗೆ, ಅಂಗವಿಕಲಾ ಘೋಷಣಾ ವೇತನ 6, ಮನಸ್ವಿನಿ ಯೋಜನೆ ವೇತನ 3, ಇಂದಿರಾ ಗಾಂಧಿ ರಾಷ್ಟೀಯ ವೃದ್ಯಾಪ್ಯ ವೇತನ 7, ಒಟ್ಟಾಗಿ 54 ಹಾಗೂ ಮನೆ ಹಾನಿ ವಿವರ ಎ ಶ್ರೇಣಿ 02, ಬಿ2 ಶ್ರೇಣಿ 26, ಒಟ್ಟು 28 ಈ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಇದರ ಜೊತೆಗೆ 10 ಜನ ಮಹಿಳೆಯರಿಗೆ ಸೀಮಂತ ಕಾರ್ಯವನ್ನು ಸಹ ಅಧಿಕಾರಿಗಳೊದಿಗೆ ನಡಸಿ ಕೊಟ್ಟರು.
ಉಪಸ್ಥಿಯಲ್ಲಿ: ಉಪವಿಭಾಗಾಧಿಕಾರಿ ಹುಲ್ಲಮನೆ ತಿಮ್ಮಣ್ಣ, ತಹಶಿಲ್ದಾರ್ ಶ್ರೀಮತಿ ರೇಣುಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಅನಿತ, ಉಪಧ್ಯಾಕ್ಷರಾದ ಗೊವಿಂದ್ ರಾಜ್, ಸಿಡಿಪಿಒ ಮಹಾಂತೇಶ್ ಪೂಜಾರ್, ಸಮಾಜ ಕಲ್ಯಾಣಾಧಿಕಾರಿ ಸುಮ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಪ್ರಕಾಶ್ ನಾಯ್ಕ್ ,ನಾಗೇಶ್ ನಾಯ್ಕ್, ನಟರಾಜ್ ,ಪ್ರವೀಣ್ ಪಿ ಆರ್ ,ಸುತ್ತಮುತ್ತಲಿನ ಗ್ರಾಮಸ್ತರು ಸಹ ಭಾಗಿಯಾಗಿದ್ದರು.