ಸಾಸ್ವೆಹಳ್ಳಿ: ಹೊನ್ನಾಳಿ ಮತ್ತು ನ್ಯಾಮತಿ ಪಟ್ಟಣದಲ್ಲಿ ಆ. 22 ರ ಸೋಮವಾರ ಬೇಡಜಂಗಮ ಸಮುದಾಯದ ಬಂಧುಗಳಿಂದ ಧಾರ್ಮಿಕ ಭೀಕ್ಷಾಟನೆಯ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕುಳಗಟ್ಟೆಯ ಮುರಿಗೇಶಯ್ಯ ತಿಳಿಸಿದ್ದಾರೆ.
ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಗಳ ಒಕ್ಕೂಟ ನೀಡಿರುವ ಕರೆಯ ಪ್ರಯುಕ್ತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಸೋಮವಾರ ಬೆಳಗ್ಗೆ ಹೊನ್ನಾಳಿಯ ಹಿರೇಕಲ್ಮಠದಿಂದ ನಮ್ಮ ಕುಲಕಸುಬಾಗಿರುವ ಧಾರ್ಮಿಕ ಭೀಕ್ಷಾಟನೆಯನ್ನು, ನಮ್ಮ ಲಾಂಛನಗಳಾದ ಜೋಳಿಗೆ, ಬೆತ್ತ ಹಿಡಿದು ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ಹಾಗೂ ನ್ಯಾಮತಿ ಪಟ್ಟಣದ ಕಲ್ಮಠದಿಂದ ಪ್ರಮುಖ ರಾಜಬೀದಿಗಳಲ್ಲಿ ಧಾರ್ಮಿಕ ಭೀಕ್ಷಾಟನೆಯನ್ನು ಮಾಡುತ್ತೇವೆ. ನಂತರ ತಾಲ್ಲೂಕು ಕಛೇರಿಗೆ ತೆರಳಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮೂಲಕ ಮನವಿ ಪತ್ರ ನೀಡಲಾವುದು ಎಂದರು.
ಪ್ರತಿಭಟನೆಯಲ್ಲಿ ಪಕ್ಷಬೇಧ ಮರೆತು ಪಾಲ್ಗೊಳ್ಳಿ ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಕೆ.ಎಂ.ಬಸವರಾಜಯ್ಯ, ಹನುಮನಹಳ್ಳಿ ಮಠದ ಲೋಕಯ್ಯ, ಕ್ಯಾಸಿನಕೆರೆ ಜಗದೀಶಯ್ಯ , ರಾಂಪುರ ಮಠದ ಪ್ರಕಾಶಯ್ಯ, ಬೆನಕನಹಳ್ಳಿ ಕಾರ್ತಿಕ್ ಕುಮಾರ್ ಮಠದ್ ಇದ್ದರು.