ಪುಸ್ತಕಗಳು ಎಂದರೆ ಕೇವಲ ಮುದ್ರಿತ ಪುಟಗಳ ಸಂಕಲನವಲ್ಲ, ಅಲ್ಲೊಂದಿಷ್ಟು ಮೌಲ್ಯಗಳನ್ನು ಹೊಂದಿರುತ್ತದೆ ಎಂದು ದಾವಣಗೆರೆಯ ಕನ್ನಡ ಜಾಗೃತಿ ಕೇಂದ್ರದÀ ಸಂಸ್ಥಾಪಕರೂ, ಕೃತಿಕಾರರೂ ಆದ ಎಸ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ಭಾನುವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಪರಿಷತ್, ಕನ್ನಡ ಜಾಗೃತಿ ಕೇಂದ್ರ, ಶರಣ ಸಾಹಿತ್ಯ ಪರಿಷತ್, ಸಿರಿಗನ್ನಡ ವೇದಿಕೆ ತಾಲ್ಲೂಕು ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ನಾಲ್ಕು ಕೃತಿಗಳ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದು ಕೃತಿ ಒಂದು ಕಾಲದ ಸಂಸ್ಕøತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಇನ್ನೊಂದು ಕಾಲಕ್ಕೆ ಕೊಂಡೊಯ್ಯುವ ವಾಹಿನಿ ಎಂದು ಅವರು ಹೇಳಿದರು.
ಹರಪನಹಳ್ಳಿಯ ಉಪನ್ಯಾಸಕ ಡಾ. ಮಲ್ಲಿಕಾರ್ಜುನ್ ಮಾತನಾಡಿ, ಪುಸ್ತಕಗಳನ್ನು ಓದಿದರೆ ವಿವೇಕ, ಜ್ಞಾನ, ಆರೋಗ್ಯ ವೃದ್ಧಿಸುತ್ತದೆ ಎಂದರು. ಆದರೆ ಇಂದು ಪುಸ್ತಕಗಳ ಜಾಗದಲ್ಲಿ ಫೆಸ್‍ಬುಕ್, ವಾಟ್ಸಪ್ ಗಳು ತುಂಬಿಕೊಂಡಿದೆ. ಇದರಿಂದ ನಮ್ಮ ಸಂಸ್ಕøತಿ ಎಲ್ಲೋ ಅಧ:ಪತನಕ್ಕೆ ಹೋಗುತ್ತಿದೆ ಎಂದರು. ಇದರಿಂದ ಬರಹಗಾರರಿಗೂ ಪ್ರೋತ್ಸಾಹ ಸಿಗುವುದಿಲ್ಲ ಎಂದರು.
ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಶಾಂತಿ ನೆಮ್ಮದಿ ಬೇಕಾದರೆ ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡಬೇಕು, ಈಗ ಎಲ್ಲರಿಗೂ ಸಮಯದ ಅಭಾವವಿದೆ. ಅದರ ನಡವೆಯೂ ಸ್ವಲ್ಪ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಬೇಕು,ಬದುಕನ್ನು ಅರಳಿಸುವ ಕೆಲಸ ಆಗಬೇಕು. ಕೆರಳಿಸಬಾರದು, ಈ ಕೆಲಸವನ್ನು ಸಾಹಿತಿಗಳು ಮಾಡುತ್ತಿದ್ದಾರೆ ಎಂದು ಸ್ವಾಮೀಜಿಗಳು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಮುರಿಗೆಪ್ಪ ಮಾತನಾಡಿ, ಪುಸ್ತಕಗಳು ಮನುಕುಲಕ್ಕೆ ಬಿಟ್ಟು ಹೋಗುವ ಆಸ್ತಿ ಎಂದರು. ಪುಸ್ತಕ ಪ್ರೇಮಿಗೆ ಸ್ನೇಹಿತರ ಅಗತ್ಯವಿಲ್ಲ ಎಂದರು.
ಎಸ್. ಮಲ್ಲಿಕಾರ್ಜುನಪ್ಪ ರಚಿಸಿದ ಕೃಷಿ ಆಶೀರ್ವದಿಸಿ ಹರಸುವ ಕೃಪೆ ತೋರಿದ್ದರು ನಡೆದಾಡುವ ದೇವರು, ಸಾಹಿತಿ ಯು.ಎನ್. ಸಂಗನಾಳ ಮಠ್ ಅವರ ವಚನಾನುಭವ, ಪಿ.ಎಂ. ಸಿದ್ದಯ್ಯ ಅವರ ಒಂದಿಷ್ಟು ಸುಮ್ಮನೆ ಹಾಗೂ ಶಕುಂತಲ ಯು. ಅವರ ಅರಳುವ ಬದುಕು ” ಎನ್ನುವ ಕೃತಿಯನ್ನು ಸ್ವಾಮೀಜಿ, ಮುರಿಗೆಪ್ಪ ಗೌಡ ಸೇರಿದಂತೆ ಅತಿಥಿಗಳು ಲೋಕಾರ್ಪಣೆ ಮಾಡಿದರು.
ಕೃತಿ ಕುರಿತು ಎಸ್. ಮಲ್ಲಿಕಾರ್ಜುನಪ್ಪ, ಕೆ. ಸಿದ್ದಪ್ಪ, ಕೆ.ಎಸ್. ವೀರಭದ್ರಪ್ಪ, ಶಿಕ್ಷಕಿ ಸುಧಾ ಶಿವಪ್ಪ ಎಚ್. ಅವರು ಮಾತನಾಡಿದರು.
ಕವಿಗೋಷ್ಠಿ : ಕೃತಿಗಳ ಲೋಕಾರ್ಪಣೆ ನಂತರ ಸಿದ್ದಗಂಗಾ ಮಠಾಧೀಶರ ಕುರಿತು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಉಪನ್ಯಾಸಕ ಡಾ. ಎ.ಎಂ. ರಾಜಶೇಖರಯ್ಯ, ಎ.ಕೆ. ಫೌಂಡೇಶನ್ ಅಧ್ಯಕ್ಷ ಕೆ.ಬಿ. ಕೋಟ್ರೇಶ್, ದಾವಣಗೆರೆ ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಎಸ್. ಎಂ. ಮಲ್ಲಮ್ಮ, ದಾವಣಗೆರೆ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಉಪಸ್ಥಿತರಿದ್ದು, ಮಾತನಾಡಿದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ತಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಕೆ. ಆಂಜನೇಯ ವಹಿಸಿದ್ದರು. ಗೋಷ್ಠಿಯಲ್ಲಿ 25 ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜ್‍ಶೇಖರ್ ಗುಂಡಗಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ವೀರಭದ್ರಪ್ಪ ತೆಲಗಿ ಅವರು ಕಾರ್ಯಕ್ರಮವನ್ನು ಸಂಘಟಿಸಿ ನಡೆಸಿಕೊಟ್ಟರು. ಕತ್ತಿಗೆ ನಾಗರಾಜ್ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ನಿರೂಪಿಸಿದರು.
ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೃತಿಗಳ ಲೋಕಾರ್ಪಣೆ ಮಾಡಿದರು. ಎಸ್. ಮಲ್ಲಿಕಾರ್ಜುನಪ್ಪ,ಡಾ. ಎ.ಎಂ. ರಾಜಶೇಖರಯ್ಯ, ಎ.ಕೆ. ಫೌಂಡೇಶನ್ ಅಧ್ಯಕ್ಷ ಕೆ.ಬಿ. ಕೋಟ್ರೇಶ್, ದಾವಣಗೆರೆ ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಎಸ್. ಎಂ. ಮಲ್ಲಮ್ಮ, ದಾವಣಗೆರೆ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *