ಹೊನ್ನಾಳಿ : ವೀರಸಾವರ್ಕರ್ ಪೋಟೋವನ್ನು ನಾವು ಮನೆಗಳಲ್ಲಿ, ಮನೆಯಮುಂದೆ ಹಾಕಿಕೋಳ್ಳುತ್ತೇವೆ, ಕಾಂಗ್ರೇಸ್‍ನವರಿಗೆ ತಾಕತ್ ಇದ್ದರೇ ಟಿಪ್ಪುವಿನ ಪೋಟೋವನ್ನು ಮನೆಯ ಒಳಗೆ,ಮನೆಯ ಹೊರಗೆ ಹಾಕಿಕೊಳ್ಳಲಿ ನೋಡೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಪೋಟೋಗಳನ್ನು ನಾವು ಹಾಕಿಕೊಳ್ಳುತ್ತೇವೆ, ನಾವು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಂದ ಶಾಸಕರು, ನಿಮ್ಮಂತೆ ಓಟಿಗಾಗೀ ನಾವು ಟಿಪ್ಪು ಜಯಂತಿ ಆಚರಣೆ ಮಾಡುತ್ತಿಲ್ಲಾ ಎಂದರು.
ಮುಸ್ಲೀಂರೇ ಟಿಪ್ಪುವಿನ ಪೋಟೋಗಳನ್ನು ಅವರ ಮನೆಗಳಲ್ಲಿ ಹಾಕಿಕೊಳ್ಳುವುದಿಲ್ಲಾ, ನಿಮಗೆ ತಾಖತ್ ಇದ್ದರೇ ಟಿಪ್ಪುವಿನ ಪೋಟೋವನ್ನು ನಿಮ್ಮ ಮನೆಗಳಲ್ಲಿ ಮನೆಯ ಮುಂದೆ ಹಾಕಿಕೊಳ್ಳಿ ನೋಡೋಣ ಎಂದರು.
ಸಾವರ್ಕರ್ ಅವರು 14 ವರ್ಷ ಅಂಡಮಾನ್ ಜೈಲಿನಲ್ಲಿ, 13 ವರ್ಷ ಗೃಹ ಬಂಧನದಲ್ಲಿ, ಒಂದು ವರ್ಷ ಕಾಳಪಾನಿಯವನ್ನು ಕುಡಿಸಿದ್ದರು ಅಂತಹ ಮಹಾನ್ ಹೋರಾಟಗಾರರ ಸಾವರ್ಕರ್ ಎಂದರು.
ಸಿದ್ದರಾಮಯ್ಯನವರು ಮಡಿಕೇರಿ ಪ್ರವಾಸದಲ್ಲಿರುವ ಅವರ ಕಾರಿನ ಮೇಲೆ ಕಾಂಗ್ರೇಸ್ ಒಳಗುಂಪು ಮೊಟ್ಟೆ ಎಸೆದಿದೆ ಎಂದು ಹೇಳಿದ್ದೇ, ಅದು ಸತ್ಯವಾಗಿದ್ದು ಕಾಂಗ್ರೇಸ್ ಕಾರ್ಯಕರ್ತರ ಸಂಪತ್ ಸ್ವತಃ ಒಪ್ಪಿಕೊಂಡಿದ್ದು, ಡಿ.ಕೆ.ಶಿವಕುಮಾರ್ ಇನ್ನಾದರೂ ಅರ್ಥ ಮಾಡಿಕೊಳ್ಳ ಬೇಕೆಂದರು. ಇನ್ನು ಯಾರ್ಯಾರು ಕಾಂಗ್ರೇಸ್ ನವರು ಪ್ರತಿಭಟನೆ ಮಾಡಿದ್ದರೋ ಅವರು ಬೇಷರತ್ ರಾಜ್ಯದ ಜನರ ಕ್ಷಮೆ ಕೇಳ ಬೇಕೆಂದು ಆಗ್ರಹಿಸಿದರು.
ಬಿಜೆಪಿ ಕಾರ್ಯಕರ್ತರು ಸಂಯಮದಿಂದ ವರ್ತಿಸ ಬೇಕೆಂದು ಮನವಿ ಮಾಡಿದ ರೇಣುಕಾಚಾರ್ಯ, ಸಿದ್ದರಾಮಯ್ಯನವರ ಪ್ರವಾಸಕ್ಕೆ ಯಾರೂ ಕೂಡ ವಿರೋಧ ವ್ಯಕ್ತ ಪಡಿಸುವುದಿಲ್ಲಾ ಎಂದ ಶಾಸಕರು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು ನೀವು ಪ್ರವಾಸ ಮಾಡಿ ವರದಿ ನೀಡಿ ಅಷ್ಟೇ ಅಲ್ಲದೇ ಸರ್ಕಾರ ವೈಫಲ್ಯಗಳನ್ನು ತಿಳಿಸಿ ನಾವು ಅದನ್ನು ಸ್ವೀಕರಿಸುತ್ತೇವೆ ಎಂದರು.
ಇನ್ನು ಡಿ.ಕೆ.ಶಿವಕುಮಾರ್ ಬಿಜೆಪಿ ಪ್ರವಾಸ ಮಾಡಲಿ ನಾವು ಪ್ರತಿಭಟನೆ ಮಾಡುತ್ತೇವೆಂದು ಹೇಳಿದ್ದಾರೆ, ನಿಮ್ಮ ಸವಾಲನ್ನು ನಾವು ಸ್ವೀಕರಿಸುತ್ತೇವೆ ನೋಡೋಣ ಪ್ರತಿಭಟನೆ ಮಾಡಿಸಿ ಎಂದು ರೇಣುಕಾಚಾರ್ಯ ಡಿಕೆಶಿ ಗೆ ಇದೇ ವೇಳೆ ಸವಾಲು ಹಾಕಿದರು.

Leave a Reply

Your email address will not be published. Required fields are marked *