ನ್ಯಾಮತಿ:
ಪೂರ್ವಜರ ಕಾಲದಿಂದಲೂ ಬೇಡಜಂಗಮ ಸಮುದಾಯದವರು ಸಮಾಜದ ಹಿತಾಸಕ್ತಿಗಾಗಿ ದುಡಿಯುತ್ತಾ ಬಂದಿದ್ದಾರೆ ಎಂದು ಕೋಹಳ್ಳಿಮಠದ ವಿಶ್ವರಾಧ್ಯರು ಹೇಳಿದರು.
ಪಟ್ಟಣದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು ತಾಲ್ಲೂಕಿನ ಬೇಡಜಂಗಮ ಸಮುದಾದಯವರಿಂದ ಧಾರ್ಮಿಕ ಬಿಕ್ಷಾಟನೆಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜಂಗಮರು ಕೋಹಳ್ಳಿಮಠದಲ್ಲಿ ಪೂಜೆ ನೆರವೇರಿಸಿ ಪೇಟೆ ಬಸವೇಶ್ವರ ದೇವಸ್ಥಾನದಿಂದ ತಮ್ಮ ಲಾಂಛನಗಳಾದ ಕಾವಿ ಬಟ್ಟೆ ಮತು ್ತರುದ್ರಾಕ್ಷಿ ಧರಿಸಿ, ಜೋಳಿಗೆ ಬೆತ್ತ ಹಿಡಿದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಿಕ್ಷಾಟನೆಗೆ ತೆರಳಿದಾಗ ಭಕ್ತರು ಅಕ್ಕಿ, ಕಾಣಕೆರೂಪದಲ್ಲಿ ಹಣವನ್ನು ಜೋಳಿಗೆ ಹಾಕಿ ಭಕ್ತಿತೋರಿದರು.
ಪೇಟೆ ಬಸವೇಶ್ವರ ಟ್ರಸ್ಟ್‍ನವರು ಜಂಗಮ ಸಮುದಾಯದವರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.
ತಾಲ್ಲೂಕಿನ ಬೇಡಜಂಗಮ ಸಮುದಾಯz ÀÀಕೆಂಚಿಕೊಪ್ಪ ಕೆ.ಎಂ.ಲೋಕೇಶ್ವರಯ್ಯ, ಚಟ್ನಹಳ್ಳಿ ರೇವಣಸಿದ್ಧಯ್ಯ, ಮರಿದೇವರಮಠದ ಸಿದ್ಧಯ್ಯ, ಟಿ.ಎಂ.ಕುಮಾರಸ್ವಾಮಿ, ಒಡೆಯರಹತ್ತೂರು ಬಸಯ್ಯ, ಚಿನ್ನಿಕಟ್ಟೆ ಹಾಲಸ್ವಾಮಿ, ಜೋಗದ ಬಸವರಾಜಯ್ಯ, ಸವಳಂಗ ಮಲ್ಲಿಕಾರ್ಜುನಯ್ಯ, ದೊಡ್ಡೇರಿಡಿ.ಎಂ.ಹಾಲಸ್ವಾಮಿ, ಕಂಕನಹಳ್ಳಿ ಹಾಲಸ್ವಾಮಿ, ಕುರುವ ಹಾಲಸಿದ್ದಯ್ಯ, ಕೆಂಚಿಕೊಪ್ಪ ಶಾಂತಯ್ಯಕೆ.ಎಂ.ವಿಶ್ವನಾಥಯ್ಯ, ದವನಕಟ್ಟೆಮಠÀ ಮಲ್ಲಿಕಾರ್ಜುನಯ್ಯ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *