ಹೊನ್ನಾಳಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ನಿರಂತರವಾಗಿ ಸುರಿದ ಮಳೆಯಿಂದಾಗಿ ಆಸ್ತಿ,ಪಾಸ್ತಿ ಹಾನಿಯಾದವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮಳೆಯಿಂದ ಹಾನಿಯಾದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಈ ಹಿಂದೆ ಇದ್ದ ಸರ್ಕಾರಗಳು ಮನೆಯಿಂದ ಹಾನಿಯಾದರೆ ಕನಿಷ್ಟ ಪ್ರಮಾಣದಲ್ಲಿ ಪರಿಹಾರ ನೀಡುತ್ತಿದ್ದವು, ಆದರೆ ನಮ್ಮ ಸರ್ಕಾರ ಬಂದ ಮೇಲೆ ಗರಿಷ್ಟ ಪ್ರಮಾಣದಲ್ಲಿ ಪರಿಹಾರವನ್ನು ನೀಡುವ ಮೂಲಕ ಸಂಕಷ್ಟದಲ್ಲಿರುವವರ ಕಣ್ಣೀರು ಹೊರೆಸುವ ಕೆಲಸ ಮಾಡುತ್ತಿದೆ ಎಂದರು.
ಮಳೆಯಾದ ದಿನದಿಂದ ನಾನು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಮಳೆಯಾನಿ ವೀಕ್ಷಿಸುವುದರ ಜೊತೆಗೆ ಅಧಿಕಾರಿಗಳು ಸಮಗ್ರ ವರದಿ ನೀಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನಲ್ಲದೇ ಜನರ ಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡುತ್ತಿದ್ದೇನೆಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 434 ಮನೆಗಳಿಗೆ ನೀರು ನುಗ್ಗಿದ್ದರೇ, ತಾಲೂಕಿನಾಧ್ಯಂತ 428 ಮನೆಗಳಿಗೆ ಹಾನಿಯಾಗಿದ್ದು ಅವರಿಗೆ ಎ.ಬಿ.ಸಿ ಕ್ಯಾಟರಿಗನುಗುಣವಾಗಿ ಅವಳಿ ತಾಲೂಕಿನಾಧ್ಯಂತ 10 ಕೋಟಿ ರೂಪಾಯಿ ಪರಿಹಾರಿ ನೀಡಲಾಗಿದೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ 30 ಸಾವಿರ ಎಕರೆ ಬೆಳೆಯಾನಿಯಾಗಿದ್ದು ಅಧಿಕಾರಿಗಳಿಂದ ಸಮಗ್ರ ವರದಿ ಬಂದ ಕೂಡಲೇ ಅವರಿಗೂ ಕೂಡ ಪರಿಹಾರ ಕೊಡಲಾಗುವುದು ಎಂದರು.
ಜನಪ್ರತಿನಿಧಿಯಾದವನು ಜನರ ಕಷ್ಟಕ್ಕೆ ಸ್ಪಂಧಿಸ ಬೇಕಾಗಿದ್ದು ಅವನ ಕರ್ತವ್ಯ ಈ ನಿಟ್ಟಿನಲ್ಲಿ ನಾನು ಅವಳಿ ತಾಲೂಕಿನಾಧ್ಯಂತ ಸಂಚರಿಸಿ ಜನರ ಸಂಕಷ್ಟ ಹಾಲಿಸುವ ಕೆಲಸ ಮಾಡುತ್ತಿದ್ದೇನೆಂದರು.
ವಿವಿಧ ಗ್ರಾಮಗಳಿಗೆ ಭೇಟಿ : ತಾಲೂಕಿನ ಮುಕ್ತೇನಹಳ್ಳಿ,ಕೆಂಗಲಹಳ್ಳಿ, ಬನ್ನಿಕೋಡು ನೆಲವೊನ್ನೆ ಕುಂಬಳೂರು,ಯಕ್ಕನಹಳ್ಳಿ, ತಿಮ್ಲಾಪುರ, ತಿಮ್ಲಾಪುರ ತಾಂಡ. ನೆರಲಗುಂಡಿ, ಘಂಟ್ಯಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು, ಮಳೆಯಿಂದ ಹಾನಿಯಾದ ಪ್ರತಿಯೊಂದು ಮನೆಗೂ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರಲ್ಲದೇ, ಮಳೆ ಕಳೆದುಕೊಂಡವರಿಗೆ ಆತ್ಮಸ್ಥೈರ್ಯ ಹೇಳಿದರು.
ಈ ಸಂದರ್ಭ ಇಓ ರಾಮಬೋವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದ ಮುಖಂಡರಿದ್ದರು.

Leave a Reply

Your email address will not be published. Required fields are marked *