ಕೊಡಗಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ಕಾರಿನ ಮೇಲೆ ಮೊಟ್ಟೆ ಎಸೆದ ಆರ್ ಎಸ್ ಎಸ್ – ಬಿಜೆಪಿ ಕಾರ್ಯಕರ್ತ ಸಂಪತ್ ಕುಮಾರ್, ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸಲು ಹೊರಟಿರುವುದು ಹಾಗೂ ಸ್ವತಃ ಸಂಪತ್ ಕುಮಾರ್ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿರುವುದು ಆಧಾರ ರಹಿತವಾಗಿದೆ.

ಇತ್ತೀಚೆಗೆ ದೇಶದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಸಿ ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ನೋಂದಣಿ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದು,
ಸಂಪತ್ ಕುಮಾರ್ ಕಾಂಗ್ರೆಸ್ ಕಾರ್ಯಕರ್ತನೆಯಾಗಿದ್ದರೆ, ಆತನ ಸದಸ್ಯತ್ವ ನೋಂದಣಿ ಸಂಖ್ಯೆ ನೀಡಬೇಕಾಗಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ಆಗ್ರಹಿಸಿದ್ದಾರೆ.

ನಾಯಕರ ಜೊತೆ ತೆಗೆಸಿಕೊಂಡ ಫೋಟೋಗಳು ಸುಳ್ಳಾಗಬಹುದು, ಆರ್ ಎಸ್ ಎಸ್ ಬೈಟೆಕ್ಗಳಲ್ಲಿ ಭಾಗವಹಿಸಿದ್ದ ಫೋಟೋಗಳು ಸುಳ್ಳಾಗಬಹುದು ಆದರೆ ನಿಜವಾಗಿಯೂ ಕಾಂಗ್ರೆಸ್ ಕಾರ್ಯಕರ್ತನೆಯಾಗಿದ್ದರೆ ಸದಸ್ಯತ್ವ ಪಡೆದುಕೊಂಡಿರುವುದು ಸತ್ಯವೇಯಾಗಿದ್ದರೆ ತಕ್ಷಣವೇ ಅದರ ಮಾಹಿತಿಯನ್ನು ಮಾಧ್ಯಮದಲ್ಲಿ ಬಹಿರಂಗಪಡಿಸಲಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *