ನ್ಯಾಮತಿ ಃ ನ್ಯಾಮತಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಒಟ್ಟು 24 ಗ್ರಾಮ ವೃತ್ತಗಳಿದ್ದು.ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯನಿರ್ವಹಿಸಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‍ಟಾಪ್ (ಕಂಪ್ಯೂಟರ್) ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ನ್ಯಾಮತಿ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಸಿಎಂ ರಾಜಕೀಯ ಕಾರ್ಯದರ್ಶಿಶಾಸಕ ಎಂ.ಪಿ.ರೇಣುಕಾಚಾರ್ಯಅವರಿಗೆ ಮನವಿ ಪತ್ರ ನೀಡಿದೆ.
ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ನ್ಯಾಮತಿ ತಾಲೂಕು ಘಟಕದ ಅಧ್ಯಕ್ಷ ಜಿ.ರಾಘವೇಂದ್ರ ಮಾತನಾಡಿ ನ್ಯಾಮತಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಒಟ್ಟು 24 ಗ್ರಾಮ ವೃತ್ತಗಳಿದ್ದು.ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈವರೆಗೆ ಇವರಿಗೆ ಯಾವುದೇ ಲ್ಯಾಪ್ ಟಾಪ್ (ಕಂಪ್ಯೂಟರ್) ಒದಗಿಸಿರುವುದಿಲ್ಲ. ಈ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಕೆಲಸಗಳ ನಿರ್ವಹಣೆಗೆ ಲ್ಯಾಪ್ ಟಾಪ್‍ನ ಅತೀ ಅವಶ್ಯಕತೆ ಇರುತ್ತದೆ. ಬೆಳೆಹಾನಿ ಪರಿಹಾರ ನಮೂದು ಮಾಡಲು,ಪಹಣಿಗೆ ಮತ್ತು ಮತದಾರರ ಆಧಾರ್ ಜೋಡಣೆ, ಜನನ ಮರಣ ನೋಂದಣಿÉ, ರೈತರಿಗೆ ಅವರ ಬೆಳೆ ಮತ್ತು ಸರ್ವೆ ನಂಬರುಗಳ ಮಾಹಿತಿ ನೀಡಲು,ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಫಸಲ್ ಭೀಮಾ ಯೋಜನೆ,ಮತ್ತು ಬೆಳೆ ವಿಮೆ ಯೋಜನೆ ಮಾಹಿತಿ ನೀಡಲು ಹೀಗೆ ಹಲವಾರು ಯೋಜನೆಗಳ ಕೆಲಸಗಳನ್ನು ಸಾರ್ವಜನಿಕರಿಗೆ ಸರಿಯಾದ ವೇಳೆಗೆ ತಲುಪಿಸಲು ಅನುಕೂಲವಾಗುತ್ತದೆ ತಾಲೂಕಿನ 24 ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ ಟಾಪ್ (ಕಂಪ್ಯೂಟರ್) ಒದಗಿಸ ಬೇಕೆಂದು ಮನವಿ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ನ್ಯಾಮತಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಗಣೇಶ್ , ಪದಾಧಿಕಾರಿಗಳಾದ ಎಂ.ಟಿ.ಪಾಟೀಲ್, ಮುಬಾರಕ್, ಶಿವಕುಮಾರ್, ಕೊಟ್ರೇಶ್, ಮಂಜುನಾಥ, ಮಾಲತೇಶ್,ಸೋಮು,ಪ್ರಶಾಂತ್, ನಾಗನಾಯ್ಕ್ ಇತರರು ಇದ್ದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‍ಟಾಪ್ (ಕಂಪ್ಯೂಟರ್) ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ಸಿಎಂ ರಾಜಕೀಯ ಕಾರ್ಯದರ್ಶಿಶಾಸಕ ಎಂ.ಪಿ.ರೇಣುಕಾಚಾರ್ಯಅವರಿಗೆ ಮನವಿ ಪತ್ರ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ನ್ಯಾಮತಿ ತಾಲೂಕು ಘಟಕದ ಪದಾಧಿಕಾರಿಗಳು.