ಹೊನ್ನಾಳಿ ಆಗಸ್ಟ್ 25 ಪಟ್ಟಣದಲ್ಲಿರುವ ಪುರಸಭೆ ಸಭಾಂಗಣದಲ್ಲಿ ಇಂದು ಅಧ್ಯಕ್ಷರು ಉಪಾಧ್ಯಕ್ಷರ ನೇತೃತ್ವದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.
ಅಧ್ಯಕ್ಷರ ನೇತೃತ್ವದಲ್ಲಿ ಸರ್ವ ಸದಸ್ಯರುಗಳು ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡಿನಲ್ಲಿ ಚರಂಡಿ ವ್ಯವಸ್ಥೆ ಇರಬಹುದು ಬೀದಿ ದೀಪದ ವ್ಯವಸ್ಥೆ ಕುಡಿಯುವ ನೀರು ಹಾಗೂ ಯುಜಿಡಿ ವ್ಯವಸ್ಥೆ ಇನ್ನು ಹಲವಾರು ವಿಷಯದ ಬಗ್ಗೆ ಕುಲಂಕುಶವಾಗಿ ಚರ್ಚೆ ನಡೆಸಲಾಯಿತು.
ಸ್ವತಂತ್ರ ಅಭ್ಯಾರ್ಥಿಯಾದ ಧರ್ಮಪ್ಪನವರು ನಂತರ ಮಾತನಾಡಿ ಅವರು ಮತ್ತು ಅಧ್ಯಕ್ಷರ ಮಧ್ಯ ನೇರವಾಗಿ ಚರ್ಚೆ ನಡೆಯಿತು. ಅಧ್ಯಕ್ಷರಿಗೆ ನೇರವಾಗಿ ಧರ್ಮಪ್ಪನವರು ಆಶ್ರಯ ಯೋಜನೆ ಅಡಿಯಲ್ಲಿ 2016 ,17 18 19 20 21 22 ನೇ ಸಾಲಿನಲ್ಲಿ ಮನೆಯನ್ನು ಮಂಜೂರು ಮಾಡಿದ್ದೀರಿ ಆಶ್ರಯ ಮನೆಯ ಫಲಾನುಭವಿಗಳು ಸಾಲವನ್ನು ಮಾಡಿಕೊಂಡು ಮನೆಯನ್ನು ಕಟ್ಟಿಕೊಂಡಿದ್ದಾರೆ ಇಲ್ಲಿಯವರೆಗೆ ಅವರಿಗೆ ಬಿಲ್ಲನ್ನು ಮಾಡಿ ಕೊಟ್ಟಿಲ್ಲ. ಅವರ ಬದುಕಿನ ಸ್ಥಿತಿ ಡೋಲಾಯಮಾನವಾಗಿದೆ ಆದ್ದರಿಂದ ಅಕ್ಟೋಬರ್ 2ನೇ ತಾರೀಖಿನ ಒಳಗೆ ಬಿಲ್ಲನ್ನು ಮರು ಪಾವತಿ ಮಾಡದೇ ಇದ್ದರೆ ಪುರಸಭೆ ಎದುರುಗಡೆ ಶಾಮಿಯಾನ ಹಾಕಿಕೊಂಡು ಸತ್ಯಾಗ್ರಹವನ್ನ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಉತ್ತರವಾಗಿ ಮುಖ್ಯಾಧಿಕಾರಿ ಎಚ್ ಎಮ್ ವೀರಭದ್ರಯ್ಯನವರು ಅಷ್ಟರ ಒಳಗೆ ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಪ್ರಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಧರ್ಮಪ್ಪನವರಿಗೆ ಉತ್ತರಿಸಿದ್ದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ರಂಗಪ್ಪ ಎಸ್ ಟಿ ಉಪಾಧ್ಯಕ್ಷರಾದ ಶ್ರೀಮತಿ ರಂಜಿತ್ ಒಡ್ಡಿ ಚೆನ್ನಪ್ಪ ಮುಖ್ಯಾ ಧಿಕಾರಿ ಎಚ್ಎಂ ವೀರಭದ್ರಯ್ಯ. ಸದಸ್ಯರುಗಳಾದ ಕೆವಿ ಶ್ರೀಧರ್. ಓಬಳಾದರ ಬಾಬು, ಬಾವಿನಮನೆ ರಾಜಪ್ಪ, ಧರ್ಮಪ್ಪ, ಸುರೇಶ್ ಅಪ್ಪಾಜಿ ಬಾರ್, ರಾಜೇಂದ್ರ, ಮೇಲಪ್ಪ, ಸಾವಿತ್ರಮ್ಮ ವಿಜೇಂದ್ರಪ್ಪ, ತನ್ವೀರ್, ಸುಮಾ ಇಂಚರ ಮಂಜುನಾಥ್ ಇನ್ನು ಹಲವಾರು ಪುರಸಭೆ ಸದಸ್ಯರು ಪುರಸಭೆ ಸಿಬ್ಬಂದಿ ವರ್ಗದವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.