ಹೊನ್ನಾಳಿ : ಹೈಕೋರ್ಟ ನಲ್ಲಿ ನಾಗರೀಕರ ಒಕ್ಕೂಟ ಚಾಮರಾಜ ಪೇಟೆ ಕಂದಾಯ ಇಲಾಖೆ ಆಟದ ಮೈದಾನದಲ್ಲಿ ಗಣೇಶನನ್ನು ಕೂರಿಸಲು ಗಣೇಶೋತ್ಸವಕ್ಕೆ ಅವಕಾಶ ನೀಡ ಬೇಕೆಂದು ವಿನಂತಿ ಮಾಡಿದ್ದು, ಹಿಂದೂ ವಿಭಾಗೀಯ ಪೀಠ ಹಿಂದೂಗಳ ಭಾವನೆ ಪುರಸ್ಕರಿಸಿ, ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಆದೇಶ ಮಾಡಿದ್ದು ಅದನ್ನು ಸ್ವಾಗತಿಸುತ್ತೇವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಯಾಲಯದ ಆದೇಶ ಬರುತ್ತಿದ್ದಂತೆ, ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡಿ ಸಹಿಹಂಚಿ ಸಂಭ್ರಮಿಸಿ ಅವರು ಮಾತನಾಡಿದರು.
ನ್ಯಾಯಾಲಯದ ಆದೇಶವನ್ನು ನಾವು ಗೌರವಿಸುತ್ತೇವೆ, ಈ ನೆಲದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸ ಬೇಕೆಂದರು.
ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆಂದ ಶಾಸಕರು, ಸಿಎಂ, ಕಂದಾಯ ಸಚಿವರು, ಗೃಹ ಸಚಿವರು ಹಿಂದೂಗಳ ಭಾವನೆ ಪುರಸ್ಕರಿಸಿ ಅದು ಈದ್ಗಾ ಮೈದಾನ ಅಲ್ಲಾ ಕಂದಾಯ ಇಲಾಖೆಗೆ ಸೇರಿದ ಆಟದ ಮೈದಾನ, ಅಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡ ಬೇಕೆಂದರು.
ನಾವೆಲ್ಲಾ ಸಂತೋಷದಿಂದ ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇವೆ ಸಂಭ್ರಮಿಸುತ್ತೇವೆಂದ ಶಾಸಕರು, ನಾಗರೀಕರ ಒಕ್ಕೂಟದ ಮನವಿ ಹಾಗೂ ಹಿಂದುಗಳ ಭಾವನೆ ಪುರಸ್ಕರಿಸಿ ನಮ್ಮ ಸರ್ಕಾರ ತಕ್ಷಣ ಇದಕ್ಕೆ ಮನ್ನಣೆ ಕೊಡ ಬೇಕೆಂದರು.

Leave a Reply

Your email address will not be published. Required fields are marked *