ಹೊನ್ನಾಳಿ:
ತಾಲೂಕಿನ ಪಿಯುಸಿ ವಿದ್ಯಾರ್ಥಿಗಳು ಸಿಇಟಿಯಲ್ಲಿ ಪಡೆದ ಇಂಜಿನಿಯರಿಂಗ್ ರ್ಯಾಂಕಿಂಗ್‍ನ ಆಧಾರದ ಮೇಲೆ ದಾಖಲೆಗಳನ್ನು ಪರಿಶೀಲಿಸುವ ಕಾರ್ಯವನ್ನು ಇಲ್ಲಿನ ಬಿಆರ್‍ಸಿ ಕಚೇರಿಯಲ್ಲಿ ಶುಕ್ರವಾರ ನಡೆಸಲಾಯಿತು.
ಈ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಬಿಆರ್‍ಪಿ ನೀಲೇಶ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಕನ್ನಡ ಮಾಧ್ಯಮ ಕಲಿಕೆ, ಗ್ರಾಮೀಣ ವ್ಯಾಸಂಗ ದೃಢೀಕರಣ ಪತ್ರಗಳು, ಅಲ್ಪಸಂಖ್ಯಾತರ ವಿಭಾಗದ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಗಸ್ಟ್ 22ರಿಂದ ಈ ಕಾರ್ಯವನ್ನು ಆರಂಭಿಸಿದ್ದು ಸೆಪ್ಟಂಬರ್ 7ರವರೆಗೆ ನಡೆಸಲಿದೆ. ಈವರೆಗೆ ಒಟ್ಟು 23 ವಿದ್ಯಾರ್ಥಿಗಳ ದಾಖಲಾತಿಗಳನ್ನು ಅಪ್‍ಲೋಡ್ ಮಾಡಲಾಗಿದೆ ಎಂದು ಹೇಳಿದರು.


ವಿದ್ಯಾರ್ಥಿಗಳ ಸಿಇಟಿ ರ್ಯಾಂಕಿಂಗ್‍ಗಳನ್ವಯ ನಿಗದಿಗೊಳಿಸಿದ ದಿನಾಂಕಗಳಂದು ನಾನಾ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ತಾಂತ್ರಿಕ ಸಲಹೆಗಾರ ರವಿಕುಮಾರ್, ಕೆ.ಟಿ. ಓಂಕಾರ್ ಇತರರು ಇದ್ದರು.

Leave a Reply

Your email address will not be published. Required fields are marked *