ನ್ಯಾಮತಿ:- ತಾಲ್ಲೂಕಿನ ಯರಗನಾಳ್ ಗ್ರಾಮದಲ್ಲಿಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ(ರಿ) ಯರಗನಾಳ್ ಗ್ರಾಮ ಶಾಖೆ ಇವರ ವತಿಯಿಂದ ಗ್ರಾಮ ಘಟಕ ಉದ್ಗಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಇದರ ಉದ್ಗಾಟನೆಯನ್ನು ರಂಗನಾಥ ಎ.ಕೆ ದೀಪವನ್ನು ಬೆಳಗವುದರ ಮೂಲಕ ಚಾಲನೆ ನೀಡಿದರು.
ನಂತರ ಡಾ// ಬಿ.ಆರ್ ಅಂಬೇಡ್ಕರ್ ಮತ್ತು ದೇವರಾಜ್ ಅರಸ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಯರಗನಾಳ್ ಗ್ರಾಮ ಘಟಕದ ಅಧ್ಯಕ್ಷರಾದ ಪ್ರವೀಣ್ ಎ.ಕೆ ಅಧ್ಯಕ್ಷತೆ ವಹಿಸಿದರು.
ಪ್ರಾರ್ಥನೆ:- ಮಹಿಳೆಯರು ಅಂಬೇಡ್ಕರ್ ಕ್ರಾಂತಿ ಗೀತೆಯನ್ನು ಹಾಡುವುದರೊಂದಿಗೆ ಪ್ರಾರ್ಥನೆ ಗೈದರು.

ಸ್ವಾಗತ ಭಾಷಣವನ್ನು ರುದ್ರೇಶ್ ಎನ್.ವಿ ನಡೆಸಿಕೊಟ್ಟರು

ಉಪನ್ಯಾಸಕರಾದ ಎಂ.ಸಿ ಮೋಹನ್ ರವರು ನಂತರ ಮಾತನಾಡಿ ಉನ್ನತ ವರ್ಗದ ಸಮಾಜದವರು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಸುತ್ತಿದರು, ಆದರೆ ನಮ್ಮ ದಲಿತ ಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭೆಯನ್ನು ಗುರುತಿಸಿ ನಾವೇಕೆ ಸನ್ಮಾನ ಮಾಡಬಾರದು ಅಂದುಕೊಂಡು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಯರಗನಾಳ್ ಗ್ರಾಮ ಘಟಕದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾsÀ ಪುರಸ್ಕಾರ ಮತ್ತು ಸನ್ಮಾನ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಉಪಸ್ಥಿತಿಯಲ್ಲಿ:- ಜಗದೀಶ್ ಚುರ್ಚುಗುಂಡಿ (ತಾ) ಅಧ್ಯಕ್ಷರು ಶಿಕಾರಿಪುರ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಶೇಖರಪ್ಪ ಪಿ.ಜಿ, ಉಧ್ಯಾಕ್ಷರು ಶ್ರೀಮತಿ ಸವಿತಾ, ಮಾಜಿ ಅಧ್ಯಕ್ಷರಾದ ಮಲ್ಲೇಶಪ್ಪ, ಸದಸ್ಯರಾದ ಶ್ರೀಮತಿ ಹಾಲಮ್ಮ ಎ.ಕೆ, ಅನಿಲ್, ರೂಪ, ಕಮಲಮ್ಮ, ಕುಬೇರಪ್ಪ, ಜಯಮ್ಮ, ರುದ್ರೇಗೌಡ್ರು, ದಲಿತ ಸಂಘಟನೆಯ ಮುಖಂಡರುಗಳು, ಊರಿನ ಗ್ರಾಮಸ್ಥರು ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *