ಹೊನ್ನಾಳಿ : ಅತಿವೃಷ್ಟಿ ಪರಿಹಾರ ಹಂಚಿಯಲ್ಲಿ ನಾನು ರಾಜಕೀಯ ಮಾಡಿದ್ದರೇ ನಾನು ರಾಜಕೀಯದಿಂದಲೇ ನಿವೃತ್ತಿಯೊಂದುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸೋಮವಾರ ನಗರದ ಗುರುಭವನದಲ್ಲಿ ಅತಿವೃಷ್ಟಿಯಿಂದ ಮನೆಹಾನಿಯಾದವರಿಗೆ ಮಳೆಹಾನಿ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಮಾಜಿ ಶಾಸಕರರು ರೇಣುಕಾಚಾರ್ಯ ರಾತ್ರೋ ರಾತ್ರಿ ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಜೆಸಿಬಿ ಹಚ್ಚಿ ಕೊಡವಿಸುತ್ತಿದ್ದಾರೆ, ಅಷ್ಟೇ ಅಲ್ಲದೇ 50 ಸಾವಿರ ಹಣ ಕೇಳುತ್ತಿದ್ದಾರೆಂದು ಆರೋಪ ಮಾಡಿದ್ದಾರೆ.
ನಾನು ಜೆಸಿಬಿ ಬಳಸಿ ಮನೆ ಕೆಡವಿ, ಯಾರ ಬಳಿಯಾದರೂ ಹಣ ಪಡೆದಿದ್ದರೇ ನನ್ನ ಇಡೀ ಕುಟುಂಬವೇ ಸರ್ವನಾಶವಾಗಲಿ ಎಂದು ಸವಾಲು ಹಾಕಿದರು.
ನಾನು ಬಿಜೆಪಿ, ಕಾಂಗ್ರೇಸ್ ಎಂದು ನೋಡದೇ ಪಕ್ಷಾತೀತವಾಗಿ ಎಲ್ಲರೀಗೂ ಪರಿಹಾರ ಕೊಡಿಸುವ ಕೆಲಸ ಮಾಡುತ್ತಿದ್ದೇನೆಂದ ಶಾಸಕರು, ನಾನು ಸವಾಲು ಹಾಕುತ್ತೇನೆ ನಾನು ಭ್ರಷ್ಟಾಚಾರ ಮಾಡಿದ್ದೇನೆಂದು ಆರೋಪ ಮಾಡುವ ನೀವು ಅದನ್ನು ಸಾಬೀತು ಪಡಿಸಿ ಎಂದರು.
ಭ್ರಷ್ಟಾಚಾರ ಮಾಡಿದ್ದು ನೀವು ಮರಳು,ಕರಂಟು,ಅಕ್ಕಿ,ಲಿಕ್ಕರ್ ಕದ್ದವರು ನೀವು ಶಾಸಕರಿಗೆ ಅವಳಿ ತಾಲೂಕಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನೇ ಮಾಡಿದ ಶಾಸಕರು,
ಅವಳಿ ತಾಲೂಕಿನ ಜನರು ನನಗೆ ಮಾಲೀಕರು ನಾನು ನಿಮ್ಮ ಸೇವಕ ಎಂದರು.
ನಾನು ಬೆಲೆ ಕೊಡುವುದು ನಿಮಗೆ ಮಾತ್ರ, ನಾನು ತಪ್ಪು ಮಾಡಿದರೆ ಏನಾದರೂ ಶಿಕ್ಷ ಕೊಡಿ ನಾನು ಅದಕ್ಕೆ ಬದ್ದ ಎಂದ ರೇಣುಕಾಚಾರ್ಯ 2023 ಕ್ಕೆ ಚುನಾವಣೆ ಬರುತ್ತದೇ ಜಾತಿ ರಾಜಕೀಯ ಮಾಡಿ, ನಾಟಕವಾಡಿಕೊಂಡು ಹುಲಿ ವೇಷ ಹಾಕಿಕೊಂಡು ಬರುತ್ತಾರೆ ಅವರಿಗೆ ಅವಳಿ ತಾಲೂಕಿನ ಜನರು ತಕ್ಕ ಉತ್ತರ ನೀಡುವಂತೆ ಮನವಿ ಮಾಡಿದರು.
ನಿಮ್ಮ ಮನೆಮಗ ನಿಮ್ಮ ಸೇವಕನಾದ ನನಗೆ 2023ರಲ್ಲಿ ನಿಮ್ಮ ಅಶೀರ್ವಾದ ಇರಲಿ ಎಂದ ಶಾಸಕರು ನಾನು ತಪ್ಪು ಮಾಡಿದರೇ ನನಗೆ ಶಿಕ್ಷೆ ಕೊಡಿ ಇಲ್ಲಾ ಯಾರೂ ನಾಟಕವಾಡಿಕೊಂಡು ಬರುತಾರೋ ಅವರಿಗೆ ತಕ್ಕ ಉತ್ತರ ನೀಡಿ ಎಂದರು.
ಸಾಮಾನ್ಯ ಶಿಕ್ಷಕನ ಮಗನಾದ ನಾನು ನಿಮ್ಮಗಳ ಆಶೀರ್ವಾದದಿಂದ ಮೂರು ಬಾರೀ ಶಾಸಕನಾಗಿ ಆಯ್ಕೆಯಾಗಿದ್ದೇನೆಂದ ರೇಣುಕಾಚಾರ್ಯ, ನಾನು ಶಾಸಕನಲ್ಲಾ ನಾನು ನಿಮ್ಮ ಸೇವಕ ಎಂದರು.
ಕಳೆದೊಂದು ತಿಂಗಳಿನಿಂದ ಹಗಲು ರಾತ್ರಿ ಎನ್ನದೇ ಊಟ ಉಪಹಾರ ಮಾಡದೇ ಅವಳಿ ತಾಲೂಕಿನ ಪ್ರತಿಯೊಂದು ಮನೆಹಾನಿ ಗ್ರಾಮದ ಪ್ರತಿಯೊಂದು ಮನೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇನೆಂದ ಶಾಸಕರು, ಸರ್ಕಾರದ ಸವಲತ್ತು ಜನರಿಗೆ ತಲುಪ ಬೇಕೆಂಬುದು ನನ್ನ ಉದ್ದೇಶ ಎಂದರು.
ನಮ್ಮ ಸರ್ಕಾರ ಮನೆಹಾನಿಯಾದವರಿಗೆ ಐದು ಲಕ್ಷ,ಮೂರು ಲಕ್ಷ, ಐವತ್ತು ಸಾವಿರ ಪರಿಹಾರ ಕೊಡುತ್ತಿದೆ ಎಂದ ಶಾಸಕರು, ಅತಿವೃಷ್ಟಿಯಲ್ಲಿ ಪಾಲ್ಗೊಂಡ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ನಾನು ಹೃದಯ ಸ್ಪಶ್ಮಿಯಾಗಿ ಅಭಿನಂದನೆ ಸಲ್ಲಿಸಿ ಅವರಿಗೆ ಬೃಹತ್ತಾದ ಕಾರ್ಯಕ್ರಮ ಮಾಡಿ ಗೌರವ ಸಲ್ಲಿಸುತ್ತೇನೆ ಎಂದರು.
ಅಧಿಕಾರಿಗಳಿಗೆ ನಾನು ವಿನಂತಿ ಮಾಡುತ್ತೇನೆ ಯಾರ್ಯಾರು ಮನೆ ಕಳೆದುಕೊಂಡಿದ್ದಾರೋ ಅವರ ದಾಖಲೆಗಳನ್ನು ಇನ್ನೇರಡು ದಿನಗಳಲ್ಲಿ ಸಂಗ್ರಹ ಮಾಡಿ ಅವರಿಗೆ ಪರಿಹಾರ ಕೊಡಿ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ 504 ಮನೆಗಳಿಗೆ ಹಾನಿಯಾಗಿದ್ದು ಅವರಿಗೆ ಎ,ಬಿ,ಸಿ ಕೆಟಗರಿಗನುಗುಣವಾಗಿ ಮಂಜೂರಾತ್ರಿ ಪತ್ರವನ್ನು ನೀಡಲಾಗಿದೆ ಎಂದ ಶಾಸಕರು 34 ಮನೆಗಳಿಗೆ ನೀರು ನುಗ್ಗಿದ್ದು ಅವರಿಗೂ ಇಂದೂ ಮಂಜೂರಾತ್ರಿ ಪತ್ರ ನೀಡಲಾಗಿದೆ ಎಂದರು
ಕಳೆದ ಕೆಲ ದಿನಗಳ ಹಿಂದೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ
428 ಮನೆಗಳಿಗೆ ಹಾನಿಯಾಗಿದ್ದು ಅವರಿಗೆ ಮಂಜೂರಾತಿ ಆದೇಶ ಪತ್ರ ನೀಡಿದ್ದು 434 ಮನೆಗಳಿಗೆ ನೀರು ನುಗ್ಗಿದ್ದು ಅವರಿಗೆ ತಲಾ ಹತ್ತು ಸಾವಿರ ಪರಿಹಾರದ ಆದೇಶ ಪತ್ರಗಳನ್ನು ನೀಡಲಾಗಿತ್ತು ಎಂದರು.
ಕಾರ್ಯಕ್ರಮಕ್ಕೆ ಬಂದವರಿಗೆ ಊಟದದ ವ್ಯವಸ್ಥೆ : ರೇಣುಕಾಚಾರ್ಯ ಅವಳಿ ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ಅಲ್ಲಿ ಊಟಕ್ಕೆನು ಕೊರತೆ ಇಲ್ಲಾ, ಅದೇ ರೀತಿ ಇಂದು ಗರುಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬಂಧವರಿಗೆ ಗೋದಿ ಪಾಯಸ, ಅನ್ನಸಾಂಬಾರ್ ಊಟದ ವ್ಯವಸ್ಥೆಯನ್ನು ಶಾಸಕರು ಮಾಡಿಸಿದ್ದರು.
ಈ ಸಂದರ್ಭ ಎಸಿ ತಿಮ್ಮಣ್ಣ ಹುಲುಮನಿ, ಅವಳಿ ತಾಲೂಕಿನ ತಹಶೀಲ್ದಾರ್‍ಗಳಾದ ರಶ್ಮಿ, ರೇಣುಕಾ, ಸಿಪಿಐ ದೇವರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಳಿದ್ದರು.

Leave a Reply

Your email address will not be published. Required fields are marked *