ಹೊನ್ನಾಳಿ : ಅಪ್ರತಿಮ ದೇಶ ಭಕ್ತ, ಸ್ವಾತಂತ್ರ್ಯ ಸೇನಾನಿ ವೀರಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಸಾರುವ ಸ್ಮರಣೆಯಾತ್ರೆಯು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಸಂಚರಿಸಲಿದ್ದು ಇಂದು ಸಾಂಕೇತಿಕವಾಗಿ ಸ್ಮರಣೆಯಾತ್ರೆಗೆ ಚಾಲನೆ ನೀಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸ್ಮರಣೆಯಾತ್ರೆಗೆ ಚಾಲನೆ ನೀಡುವುದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸ್ಮರಣೆಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವೀರಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಸಾರುವ ಈ ಯಾತ್ರೆಯು ಅವಳಿ ತಾಲೂಕಿನಾಧ್ಯಂತ ಸಂಚರಿಸಲಿದ್ದು, ಎಲ್ಲರೂ ಯಾತ್ರೆಯನ್ನು ಅದ್ದೂರಿಯಾಗಿ ಆರತಿ ಎತ್ತುವ ಮೂಲಕ ಸ್ವಾಗತಿಸುವುದರ ಜೊತೆಗೆ ಪ್ರತಿ ಮನೆಯಲ್ಲೂ ಸಾರ್ವಕರ್ ಅವರ ಭಾವಚಿತ್ರವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಸ್ಮರಣೆಯಾತ್ರೆಯ ಮೂಲಕ ಸಾವರ್ಕರ್ ಅವರ ಆದರ್ಶ ಗುಣಗಳನ್ನು ಜನರಿಗೆ ತಿಳಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದ ಶಾಸಕರು, ಕೆಲವರು ಸಾವರ್ಕರ್ ಸ್ವಾತಂತ್ರ ಹೋರಾಟಗಾರ ಅಲ್ಲಾ ಎಂದು ಹೇಳುತ್ತಿದ್ದು ಅವರಿಗೆ ಸಾವರ್ಕರ್ ಅವರ ಪುಸ್ತಕವನ್ನು ಕಳುಹಿಸಿ ಕೊಡುತ್ತೇವೆ ಅದನ್ನು ಓದಿ ತಿಳಿದುಕೊಳ್ಳಿ ಎಂದರು.
ವೀರಸವರ್ಕರ್ ಅಪ್ರತಿಮ ದೇಶ ಭಕ್ತ ಒಂದು ವರ್ಷ ಕಾಳಪಾನಿಯ ಶಿಕ್ಷೆ ,14 ವರ್ಷ ಗೃಹಬಂಧನ, 13 ವರ್ಷ ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಅವರನ್ನು ಇಡಲಾಗಿದ್ದು ಇಡೀ ಕುಟುಂಬವನ್ನು ತ್ಯಾಗ ಮಾಡಿದ ಮಹಾನ್ ನಾಯ್ಕ ಸಾವರ್ಕರ್ ಎಂದರು.
ಸಾವರ್ಕರ್ ಅವರ ಸ್ಮರಣೆಯಾತ್ರೆಯನ್ನು ನ್ಯಾಮತಿ, ಚೀಲೂರು,ಸವಳಂಗ, ಕುಂದೂರು, ಸಾಸ್ವೇಹಳ್ಳಿ,ಬೆಳಗುತ್ತಿಗಳಲ್ಲಿ ವೃತ್ತಗಳಲ್ಲಿ ಆಗಮಿಸಲಿದ್ದು ಅಲ್ಲಿ ಸಭೆ ಮಾಡಲಾಗುವುದು ಎಂದ ಶಾಸಕರು, ಇದರ ಸಮಾರೋಪವನ್ನು ಹೊನ್ನಾಳಿಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಮಾಡಲಾಗುವುದು ಎಂದರು.
ಕೆಲವರು ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದರೆ ಉಷಾರ್ ಎಂದು ಹೇಳಿದ್ದಾರೆ, ಅವರು ವಿರೋಧ ಪಕ್ಷದ ನಾಯಕ, ವ್ಯಕ್ತಿಗತವಾಗಿ ನಮಗೆ ಅವರ ಬಗ್ಗೆ ಗೌರವವಿದೆ ಆದರೇ ಅವರ ಹೇಳಿಯನ್ನು ನಾವು ಖಂಡಿಸುತ್ತೇವೆಂದರು.
ಈ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭೆ ಅಧ್ಯಕ್ಷ ರಂಗನಾಥ್,ಓಬಿಸಿ ಮೋರ್ಚ ತಾಲೂಕು ಅಧ್ಯಕ್ಷ ರಾಕೇಶ್, ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಜಿಲ್ಲಾ ಪ್ರಧಾನಕಾರ್ಯದರ್ಶಿ,ಶಾಂತರಾಜ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್,ತಾಲೂಕು ಪ್ರದಾನ ಕಾರ್ಯದರ್ಶಿ ಶಿವಾನಂದ್ ದಿಶಾಕಮಿಟಿ ಸದಸ್ಯ ನೆಲವೊನ್ನೆ ಮಂಜುನಾಥ್, ಮಾಜಿ ಜಿಲ್ಲಾಪಂಚಾಯಿತಿ ಉಪಾಧ್ಯಕ್ಷ ಚನ್ನಪ್ಪ, ಮಾಜಿ ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ಸೇರಿದಂತೆ ಮುಖಂಡರಾದ ಮಹೇಶ್ ಹುಡೇದ್, ಇಂಚರ ಮಂಜುನಾಥ್, ನವೀನ್,ದಿಡಗೂರು ಪಾಲಾಕ್ಷಪ್ಪ ಸೇರಿದಂತೆ ಮತ್ತೀತರರಿದ್ದರು.