ಗೌರಿ, ಗಣೇಶ ಹಬ್ಬ ನಾಡಿನ ಜನರಿಗೆ ಸುಖ ಶಾಂತಿ ಕರುಣಿಸಲಿ. ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಜಿಲ್ಲೆಯ ರೈತಾಪಿ ವರ್ಗ ಹರ್ಷಗೊಂಡಿದೆ, ತಾವು ಬಿತ್ತಿರುವ ಬೀಜ ಮೊಳಕೆಯೊಡೆದು ಪೈರಾಗಿ ತೆನೆಯಾಗಿ ಸಮೃದ್ಧಿ ಬೆಳೆ ಬೆಳೆಯಲಿ. ತಮ್ಮೆಲ್ಲಾ ಕಷ್ಟಗಳು ದೂರಾಗಿ ನೆಮ್ಮದಿಯ ಬದುಕು ನಿಮ್ಮದಾಗಲಿ, ಸಕಲ ವಿಘ್ನ ನಿವಾರಕ ವಿಘ್ನೇಶ್ವರ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಭಗವಂತನಲ್ಲಿ ಪಾರ್ಥಿಸುತ್ತೇನೆ ಎಂದು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.